entwine ಇ(ಎ)ನ್‍ಟ್ವೈನ್‍
ಸಕರ್ಮಕ ಕ್ರಿಯಾಪದ
  1. ಹಾಸುಹೊಕ್ಕಾಗಿ ಹೆಣೆ: these elements of action are closely entwined ಕಾರ್ಯದ ಈ ಅಂಶಗಳು ಹಾಸುಹೊಕ್ಕಾಗಿ ಹೆಣೆದುಕೊಂಡಿವೆ.
  2. (ಒಂದರೊಡನೆ, ಒಂದರ ಸುತ್ತಲೂ ಮತ್ತೊಂದನ್ನು) ಸುತ್ತು; ಆವರಿಸು; ದಂಡೆಗಟ್ಟು; ವೇಷ್ಟಿಸು; ಸುರುಳಿಕಟ್ಟು: entwined a pretty garland about her arms ಅವಳು ತನ್ನ ತೋಳುಗಳನ್ನು ಅಂದವಾದ ಹಾರದಿಂದ ಸುತ್ತಿಕೊಂಡಳು.
  3. (ಪ್ರಾಚೀನ ಪ್ರಯೋಗ) (ಬಳ್ಳಿಯಂತೆ) ತಬ್ಬು; ಅಪ್ಪು; ಆಲಿಂಗಿಸು.