entry ಎಂಟ್ರಿ
ನಾಮವಾಚಕ
  1. ಪ್ರವೇಶ; ಹೊಗುವಿಕೆ; ಒಳಕ್ಕೆ — ಹೋಗುವುದು, ಬರುವುದು: forbidden entry ನಿಷಿದ್ಧ ಪ್ರವೇಶ.
  2. ಪ್ರವೇಶಸ್ವಾತಂತ್ರ್ಯ; ಪ್ರವೇಶಹಕ್ಕು; ಪ್ರವೇಶಾಧಿಕಾರ.
  3. ವಿಧಿವಿಹಿತ ಪ್ರವೇಶ; ವಿಧಿವತ್ತಾದ ಪ್ರವೇಶ: the army made a triumphal entry into the town ಸೈನ್ಯವು ವಿಜಯೋತ್ಸಾಹದಿಂದ ಊರನ್ನು ಪ್ರವೇಶಿಸಿತು.
  4. (ನ್ಯಾಯಶಾಸ್ತ್ರ) ಸ್ವಾಧೀನ ಪಡಿಸಿಕೊಳ್ಳುವುದು; ಸ್ವಾಧೀನಕ್ಕೆ ತೆಗೆದುಕೊಳ್ಳುವುದು.
  5. ಪ್ರವೇಶಸ್ಥಳ; ಒಳಹೊಗುವ ಜಾಗ: at the entry to the bridge ಸೇತುವೆಯ ಪ್ರವೇಶಸ್ಥಳದಲ್ಲಿ.
  6. ಬಾಗಿಲು; ದ್ವಾರ: the procession entered the church by the south entry ಮೆರವಣಿಗೆಯು ದಕ್ಷಿಣದ್ವಾರದಿಂದ ಚರ್ಚನ್ನು ಪ್ರವೇಶಿತು.
  7. ಗೇಟು; ಹೆಬ್ಬಾಗಿಲು; ಹೊರಬಾಗಿಲು.
  8. ಮೊಗಸಾಲೆ; ಹೊರಹಜಾರ.
  9. ನದೀಮುಖ; ಅಳಿವೆ.
  10. ದಾಖಲೆ; ದಾಖಲಾತಿ; ನೋಂದಣಿ; ದಫ್ತರು, ಲೆಕ್ಕದ ಪುಸ್ತಕ, ಮೊದಲಾದವುಗಳಲ್ಲಿ ದಾಖಲೆ ಮಾಡುವುದು, ನಮೂದಿಸುವುದು: entry of a sale ಮಾರಾಟದ ದಾಖಲೆ.
  11. ದಾಖಲೆಮಾಡಿದ ಬಾಬು; ದಾಖಲೆ; ಉಲ್ಲೇಖ; ನಮೂದು; ಖತಾಯಿತಿ: made no entries in his logbook for that day ಅವನ ದಿನಚರಿಯ ಆ ದಿನಕ್ಕೆ ಯಾವ ಬಾಬೂ ಗುರುತುಹಾಕಲಿಲ್ಲ.
  12. ಸ್ಪರ್ಧಾಳು ಪಟ್ಟಿ; (ಪಂದ್ಯ ಮೊದಲಾದವುಗಳಲ್ಲಿ) ಸ್ಪರ್ಧಿಗಳ ಪಟ್ಟಿ.
  13. ಸ್ಪರ್ಧಿ; ಸ್ಪರ್ಧೆಗೆ ದಾಖಲಾಗಿರುವ ವ್ಯಕ್ತಿ ಯಾ ವಸ್ತು.
  14. ಸರಕನ್ನು ರೇವಿನಲ್ಲಿಳಿಸಲು ಅನುಮತಿ ಪಡೆಯಲು ಸುಂಕದ ಕಟ್ಟೆಯಲ್ಲಿ ನೌಕೆಯ ಸರಕಿನ ಲೆಕ್ಕ ಕೊಡುವುದು.
  15. ರಂಗಪ್ರವೇಶ; ನಟನು ರಂಗಮಂದಿರವನ್ನು ಪ್ರವೇಶಿಸುವುದು.
  16. (ಕಟ್ಟಡಗಳ ಮಧ್ಯದ ಯಾ ನಡುವಿನ) ದಾರಿ; ಮಾರ್ಗ; ಓಣಿ.
  17. ಪ್ರಾರಂಭ; ಪುನರಾರಂಭ; ಸಂಗೀತ ಕಚೇರಿಯಲ್ಲಿ ತನ್ನ ಭಾಗವನ್ನು ಆರಂಭಿಸುವುದು ಯಾ ಮತ್ತೆ ಆರಂಭಿಸುವುದು.
  18. (ಬ್ರಿಜ್‍ ಆಟ)
    1. (ಆಟಗಾರನಿಗೆ ಯಾ ಅವನ ಜೊತೆಗಾರನಿಗೆ) ಮೊದಲು ಇಳಿಯುವ ಹಕ್ಕು ಕೊಡುವ ಎಲೆ.
    2. ಮೊದಲು ಇಳಿಯುವ ಹಕ್ಕನ್ನು ಜೊತೆಗಾರನಿಗೆ ವರ್ಗಾಯಿಸುವುದು.
ಪದಗುಚ್ಛ
  1. entry card = entry18(a).
  2. entry visa, permit, etc. (ಒಂದು ದೇಶಕ್ಕೆ) ಪ್ರವೇಶ ಪರವಾನಗಿ.