entrust ಇ(ಎ)ನ್‍ಟ್ರಸ್ಟ್‍
ಸಕರ್ಮಕ ಕ್ರಿಯಾಪದ
  1. (ವಿಶ್ವಾಸಾರ್ಹ ವ್ಯಕ್ತಿಗೆ ಕರ್ತವ್ಯ, ವ್ಯಕ್ತಿ, ಪದಾರ್ಥ, ಅದರ ಜೋಪಾನದ) ಜವಾಬ್ದಾರಿ ವಹಿಸಿಕೊಡು; ಹೊಣೆ ಒಪ್ಪಿಸು; (ಅದಕ್ಕಾಗಿ ಅವನ) ವಶಕ್ಕೆ ಕೊಡು: entrusted him with the responsibility for completing the works ಕೆಲಸಗಳನ್ನು ಪೂರೈಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿದೆ.
  2. (ಕರ್ತವ್ಯ, ವ್ಯಕ್ತಿ, ವಸ್ತು, ಅದರ ಜೋಪಾನ ಇವುಗಳ ಹೊಣೆಯನ್ನು ಒಬ್ಬನಿಗೆ) ವಹಿಸು; ನಂಬಿ ಒಪ್ಪಿಸು; ನಂಬಿಕೆಯಿಂದ ಕೊಡು: can I entrust to you such confidential information? ಇಂಥ ರಹಸ್ಯ ಸಮಾಚಾರವನ್ನು ನಾನು ನಿನಗೆ ನಂಬಿ ಕೊಡಬಹುದೇ?