entrepreneur ಆನ್‍ಟ್ರಪ್ರನರ್‍
ನಾಮವಾಚಕ
  1. ವಾಣಿಜ್ಯೋದ್ಯಮಿ; ವಾಣಿಜ್ಯ ವ್ಯವಸ್ಥಾಪಕ; ವಾಣಿಜ್ಯ ನಿರ್ವಾಹಕ; ವಾಣಿಜ್ಯದ ಹೊಣೆ ಹೊತ್ತವ: he aimed at increased opportunities for the small entrepreneurs ಸಣ್ಣ ವಾಣಿಜ್ಯೋದ್ಯಮಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಅವನು ಉದ್ದೇಶಿಸಿದ.
  2. ಉದ್ಯಮಿ; ವ್ಯಾಪಾರ ಯಾ ವಾಣಿಜ್ಯ ಕೈಗೊಳ್ಳುವವ.
  3. ಮಧ್ಯವರ್ತಿ; ದಳ್ಳಾಳಿ; ಮಧ್ಯಸ್ಥಗಾರ; ಮಧ್ಯವರ್ತಿಯಾಗಿ ವರ್ತಿಸುವ ಗುತ್ತಿಗೆದಾರ, ಕಂತ್ರಾಟುಗಾರ: New York is becoming entrepreneur between Europe and the American hinterland ಯೂರೋಪಿಗೂ ಅಮೆರಿಕಾದ ಹಿನ್ನಾಡಿಗೂ ನಡುವೆ ನ್ಯೂಯಾರ್ಕ್‍ ನಗರ ಮಧ್ಯವರ್ತಿಯಾಗುತ್ತಿದೆ.