entrench ಇ(ಎ)ನ್‍ಟ್ರೆಂಚ್‍
ಸಕರ್ಮಕ ಕ್ರಿಯಾಪದ
  1. (ಬೀಡು, ಸೈನ್ಯ, ಊರು ಇವುಗಳ) ಸುತ್ತಲೂ ಕಂದಕ ತೆಗೆ, ತೋಡು, ಅಗಳು ಮಾಡು.
  2. (ರೂಪಕವಾಗಿ) (ರಕ್ಷಣಾ ಸ್ಥಳದಲ್ಲಿ) ಬೇರೂರು; ತಳವೂರು; ಭದ್ರವಾಗಿ ನೆಲಸು: the enemy entrenched himself in the fort ಶತ್ರುವು ಕೋಟೆಯಲ್ಲಿ ಭದ್ರವಾಗಿ ಬೇರೂರಿದ.
  3. (ಶಾಸನಸಭೆಯು ಭರವಸೆ ನೀಡಿರುವ ಹಕ್ಕು ಮೊದಲಾದವುಗಳಿಗೆ) ಹೆಚ್ಚಿನ ರಕ್ಷಣೆ ಒದಗಿಸು.
ಅಕರ್ಮಕ ಕ್ರಿಯಾಪದ
  1. (ರಕ್ಷಣೆಯ ಉದ್ದೇಶಕ್ಕಾಗಿ) ಅಗಳು ತೋಡು; ಕಂದಕ ತೋಡು: the platoon entrenched and awaited the enemy attack ಸೇನಾತುಕಡಿ ಕಂದಕ ತೋಡಿ ಶತ್ರುದಾಳಿಗಾಗಿ ಕಾಯುತ್ತಿತ್ತು.
  2. ಅತಿಕ್ರಮಿಸು; ಉಲ್ಲಂಘಿಸು; ಆಕ್ರಮಿಸು; ಅತಿಕ್ರಮ ಯಾ ಅಕ್ರಮ ಪ್ರವೇಶ ಮಾಡು; ತನ್ನದಲ್ಲದ್ದಕ್ಕೆ ಕೈ ಹಾಕು: to entrench upon the domain or rights of another ಇನ್ನೊಬ್ಬರ ಆಧಿಪತ್ಯ ಯಾ ಹಕ್ಕುಗಳ ಮೇಲೆ ಕೈಹಾಕುವುದು.
ಪದಗುಚ್ಛ

entrench oneself (ರೂಪಕವಾಗಿ ಸಹ) ಸುರಕ್ಷಿತ ಸ್ಥಾನದಲ್ಲಿರು; ಸುರಕ್ಷಿತ ಸ್ಥಾನವನ್ನು ಆಕ್ರಮಿಸಿಕೊ.