entrap ಇ(ಎ)ನ್‍ಟ್ರಾಪ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ entrapping, ಭೂತರೂಪ ಮತ್ತು ಭೂತಕೃದಂತ entrapped).
  1. ಬಲೆಯಲ್ಲಿ ಹಿಡಿ; ಬಲೆಗೆ ಬೀಳಿಸು; ಬೋನಿಗೆ ಬೀಳಿಸು; (ಬಲೆ, ಬೋನಿನಲ್ಲಿ ಹಿಡಿಯುವಂತೆ) ಹಿಡಿ, ಸಿಕ್ಕಿಸು: the hunters used nets to entrap the lion ಸಿಂಹ ಹಿಡಿಯಲು ಬೇಟೆಗಾರರು ಬಲೆಗಳನ್ನು ಬಳಸಿದರು.
  2. (ನಾಶ ಮೊದಲಾದವಕ್ಕೆ ಯಾ ಯಾವುದೇ ಕೆಲಸ ಮಾಡಲು ವ್ಯಕ್ತಿಯನ್ನು) ಸೆಳೆ; ಮರುಳುಗೊಳಿಸು; ದಾರಿ ತಪ್ಪಿಸು; ಹಳ್ಳಕ್ಕೆ ಕೆಡವು; ಸಿಕ್ಕಿಬೀಳಿಸು: he entrapped her into an admission of guilt ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಅವಳನ್ನು ಸಿಕ್ಕಿಬೀಳಿಸಿದನು.