See also 2entrance
1entrance ಎಂಟ್ರನ್ಸ್‍
ನಾಮವಾಚಕ
  1. ಪ್ರವೇಶ; ಹೋಗುವುದು; ಒಳಕ್ಕೆ ಹೋಗುವುದು, ಬರುವುದು: made an entrance through the window ಕಿಟಕಿಯ ಮೂಲಕ ಹೊಕ್ಕ.
  2. (ರಂಗಕ್ಕೆ ನಟನ) ಪ್ರವೇಶ; ಆಗಮನ.
  3. (ಅಧಿಕಾರ, ಹುದ್ದೆ, ಮೊದಲಾದವಕ್ಕೆ) ಬರುವುದು; ಅಧಿಕಾರದ ಆರಂಭ; ಅಧಿಕಾರ ಸ್ವೀಕಾರ: made his entrance into office one month after the election ಚುನಾವಣೆಯಾದ ಒಂದು ತಿಂಗಳ ನಂತರ ಅಧಿಕಾರ ವಹಿಸಿಕೊಂಡನು.
  4. ಪ್ರವೇಶದ ಹಕ್ಕು; ಪ್ರವೇಶಾಧಿಕಾರ: applied for entrance at a number of schools ಅನೇಕ ಶಾಲೆಗಳಿಗೆ ಪ್ರವೇಶಕ್ಕಾಗಿ ಅರ್ಜಿಹಾಕಿದನು.
  5. ಪ್ರವೇಶಧನ; ಪ್ರವೇಶಶುಲ್ಕ; ಸಂಘ, ಶಾಲೆ, ಮೊದಲಾದವಕ್ಕೆ ಸೇರುವಾಗ ಕೊಡಬೇಕಾದ ಪ್ರವೇಶ ಹಣ.
  6. ಒಳಹೊಗುವ ಬಾಗಿಲು, ಮಾರ್ಗ; ಪ್ರವೇಶದ್ವಾರ.
  7. ಪ್ರವೇಶದ ರೀತಿ; ಪ್ರವೇಶ ಮಾಡುವ ನಿರ್ದಿಷ್ಟ ಶೈಲಿ: so many were trying to copy that entrance ಎಷ್ಟೋ ಜನ ಆ ಪ್ರವೇಶದ ರೀತಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದರು.
  8. (ಸ್ಥಿತಿ, ವೃತ್ತಿ, ಹವ್ಯಾಸ, ಮೊದಲಾದವುಗಳಿಗೆ) ಪ್ರವೇಶಸಾಧನ: books were for the child the entrance to a new world ಪುಸ್ತಕಗಳು ಮಗುವಿಗೆ ಹೊಸಜಗತ್ತಿಗೆ ಪ್ರವೇಶಸಾಧನವಾದವು.
  9. ಪ್ರಾರಂಭ; ಶುರು; ಮೊದಲ ಭಾಗ; ಒಂದು ಕಾಲಾವಧಿಯ ಮೊದಲ ಭಾಗ: at the entrance of the holiday season ರಜಾಕಾಲದ ಪ್ರಾರಂಭದಲ್ಲಿ.
  10. ನೌಕೆಯ ಮುಖ; ಹಡಗಿನ ಮೂತಿ; ಮುಂಗೋಟು.
See also 1entrance
2entrance ಎಂಟ್ರನ್ಸ್‍
ಸಕರ್ಮಕ ಕ್ರಿಯಾಪದ
  1. ಪ್ರಜ್ಞೆ ತಪ್ಪಿಸು; ಪರವಶಮಾಡು; ಸಮಾಧಿಮಗ್ನ ಮಾಡು: the loud breathing of the entranced medium ಪರವಶಗೊಂಡ ವ್ಯಕ್ತಿಯ ಗಟ್ಟಿಯಾದ ಉಸಿರಾಟ.
  2. (ಸಂತೋಷದಿಂದ, ಭಯದಿಂದ) ಮೈಮರೆಸು; ಪರವಶವಾಗಿಸು: the beauty of the land entranced them ಆ ನಾಡಿನ ಚೆಲುವು ಅವರನ್ನು ಮೈಮರೆಸಿತು.
  3. (ಮೈಮರೆವಿನಿಂದಲೋ ಎಂಬಂತೆ) ಮುಗ್ಧಗೊಳಿಸು; ಮರುಳಾಗಿಸು; ಮರುಳುಗೊಳಿಸು.