entitle ಇ(ಎ)ನ್‍ಟೈಟ್‍ಲ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕ ಮೊದಲಾದವಕ್ಕೆ) ಹೆಸರಿಡು; ನಾಮಕರಣ ಮಾಡು; ಹೆಸರು ಕೊಡು: a book entitled ‘Mr.Sampath’ ‘ಮಿಸ್ಟರ್‍ ಸಂಪತ್‍’ ಎಂಬ ಹೆಸರಿನ ಪುಸ್ತಕ.
  2. (ಪ್ರಾಚೀನ ಪ್ರಯೋಗ) (ವ್ಯಕ್ತಿಗೆ) ಬಿರುದು ನೀಡು; ಪ್ರಶಸ್ತಿ ಕೊಡು.
  3. (ಸಂದರ್ಭಗಳು, ಗುಣಗಳು, ಮೊದಲಾದವುಗಳ ವಿಷಯದಲ್ಲಿ) (ವಸ್ತುವನ್ನು ಪಡೆಯಲು ಯಾ ಯಾವುದನ್ನೇ ಮಾಡಲು) ಹಕ್ಕು ಕೊಡು; ಅಧಿಕಾರ ಕೊಡು; ಅರ್ಹತೆ ನೀಡು; ಅರ್ಹಗೊಳಿಸು: his age entitles him to a pension (ಅವನ ವಯಸ್ಸಿನಿಂದಾಗಿ) ಅವನಿಗೆ ವಿಶ್ರಾಂತಿವೇತನ ಪಡೆಯಲು ಹಕ್ಕಿದೆ.
  4. ಗೊತ್ತಾದ ಹೆಸರಿನಿಂದ ಯಾ ಬಿರುದಿನಿಂದ ಕರೆ; ಸಂಬೋಧಿಸು: how does one entitle the judge when speaking directly to him ನ್ಯಾಯಾಧೀಶರ ಜೊತೆಗೆ ನೇರವಾಗಿ ಮಾತನಾಡುವಾಗ ಅವರನ್ನು ಸಂಬೋಧಿಸುವುದು ಹೇಗೆ?