See also 2entire
1entire ಇ(ಎ)ನ್‍ಟೈಅರ್‍
ಗುಣವಾಚಕ
  1. ಎಲ್ಲ; ಇಡೀ; ಪೂರ್ತಿ; ಅನಾಮತ್ತು; ಪೂರಾ; ಸಮಗ್ರ; ಸಮಸ್ತ; ಸರ್ವ; ಸಕಲ; ಪೂರ್ಣ: remained alone the entire day ಇಡೀ ದಿವಸ ಒಬ್ಬನೇ ಇದ್ದ.
  2. ಅಭಗ್ನ; ಅಭಿನ್ನ; ಭಿನ್ನವಾಗದ; ಮುರಿದಿಲ್ಲದ; ಒಡೆದಿಲ್ಲದ.
  3. ಅಚ್ಚಳಿಯದ; ಕಟ್ಟಿಲ್ಲದ; ಹಾಳಾಗದ; ಕುಂದದ; ಕ್ಷಯಿಸದ; ನಶಿಸದ: we were fortunate to find this relic entire and without fault ಈ ಅವಶೇಷವು ಅಚ್ಚಳಿಯದೆ, ಸ್ವಲ್ಪವೂ ಲೋಪದೋಷಗಳಿಲ್ಲದೆ ಸಿಕ್ಕಿದ್ದು ನಮ್ಮ ಪುಣ್ಯ.
  4. ಬೀಜದ; ಬೀಜ ಒಡೆಯದ; ಶೀಲಮಾಡದ; ಹಿಡಮಾಡಿರದ: an entire horse ಬೀಜದ ಕುದುರೆ.
  5. ನಿರುಪಾಧಿಕ; ಉಪಾಧಿರಹಿತ; ಪೂರ್ಣ: entire affection ಪೂರ್ಣ ಪ್ರೇಮ, ವಿಶ್ವಾಸ.
  6. ಬರಿಯ; ಕೇವಲ: entire delusion ಕೇವಲ ಭ್ರಾಂತಿ.
  7. ಅಖಂಡ; ಅವಿಭಕ್ತ; ಅವಿಚ್ಛಿನ್ನ; ಒಂದಾಗಿರುವ: the diamond was entire and free from flaws ವಜ್ರ ಯಾವ ಒಡಕಿಲ್ಲದೆ ಅಖಂಡವಾಗಿತ್ತು.
  8. ಅಪ್ಪಟ; ಶುದ್ಧ; ಕಲಬೆರಕೆಯಿಲ್ಲದ; ಮಿಶ್ರಣವಿಲ್ಲದ: their primitive speech has come down entire, without admixture of any kind ಅವರ ಆದಿಮ ಭಾಷೆ ಯಾವ ರೀತಿಯ ಕಲಬೆರಕೆಯಿಲ್ಲದೆ, ಶುದ್ಧವಾಗಿ ಉಳಿದುಬಂದಿದೆ.
  9. (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ಕಚ್ಚುಗಳಿಲ್ಲದ; ಕೋಚುಗಳಿಲ್ಲದ.
See also 1entire
2entire ಇ(ಎ)ನ್‍ಟೈಅರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಒಂದು ಬಗೆಯ ಬೆರಕೆ ಬಿಯರು.
  2. ಬೀಜದ (ಕುದುರೆ ಮೊದಲಾದ) ಪ್ರಾಣಿ; ಬೀಜ ಒಡೆಯದ ಪ್ರಾಣಿ.