entice ಇ(ಎ)ನ್‍ಟೈಸ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ ಮೊದಲಾದವರನ್ನು ಒಂದು ಸ್ಥಳ, ನಡತೆ, ಮಾರ್ಗ, ಮೊದಲಾದವುಗಳಿಂದ ಬೇರೆಡೆಗೆ ಯಾ ಏನಾದರೂ ಮಾಡಲು) ಆಕರ್ಷಿಸು; ಸೆಳೆ; ಮರುಳುಮಾಡು; ಮೋಡಿಮಾಡು; ಮೋಹಗೊಳಿಸು; ಪ್ರಲೋಭನಗೊಳಿಸು: he was enticed by her flirtatious ways ಅವಳ ಪ್ರಣಯಚೇಷ್ಟೆಗಳಿಂದ ಅವನು ಮೋಹಗೊಂಡನು. they were enticed by gold ಅವರು ಚಿನ್ನದಿಂದ ಪ್ರಲೋಭನಕ್ಕೊಳಗಾದರು.