enthrone ಇ(ಎ)ನ್‍ತ್ರೋನ್‍
ಸಕರ್ಮಕ ಕ್ರಿಯಾಪದ
  1. (ದೊರೆ, ಬಿಷಪ್‍, ಮೊದಲಾದವರನ್ನು, ಮುಖ್ಯವಾಗಿ ವಿಧಿವತ್ತಾದ ಅಧಿಕಾರ ಸ್ವೀಕಾರಸೂಚಕವಾಗಿ) ಸಿಂಹಾಸನಕ್ಕೇರಿಸು; ಗಾದಿಗೇರಿಸು; ಗದ್ದುಗೆಗೇರಿಸು; ಸಿಂಹಾಸನದಲ್ಲಿ ಕುಳ್ಳಿರಿಸು; ಪಟ್ಟಕಟ್ಟು; ಪಟ್ಟಾಭಿಷೇಕ ಮಾಡು (ರೂಪಕವಾಗಿ ಸಹ).
  2. ಉತ್ಕರ್ಷಿಸು; ಘನತೆಗೇರಿಸು; ಔನ್ನತ್ಯಕ್ಕೇರಿಸು; ಉನ್ನತಮಟ್ಟಕ್ಕೇರಿಸು; ಮೇಲೇರಿಸು: the frontiersman enthroned work as a God ಗಡಿನಾಡಿನವನು ಕಾಯಕವನ್ನು ದೇವರ ಮಟ್ಟಕ್ಕೆ ಏರಿಸಿದನು.