enthral(l) ಇ(ಎ)ನ್‍ತ್ರಾಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ enthralling, ಭೂತರೂಪ ಮತ್ತು ಭೂತಕೃದಂತ enthralled).
  1. (ಸಾಮಾನ್ಯವಾಗಿ ರೂಪಕವಾಗಿ) ದಾಸನನ್ನಾಗಿ ಮಾಡು; ಗುಲಾಮನನ್ನಾಗಿ ಮಾಡು; ಅಡಿಯಾಳುಮಾಡು; ವಶಮಾಡಿಕೊಳ್ಳು; ಅಧೀನಪಡಿಸು: enthralled by a woman’s beauty ಹೆಂಗಸಿನ ಸೌಂದರ್ಯಕ್ಕೆ ದಾಸನಾಗಿ.
  2. ಮೋಹಗೊಳಿಸು; ಪರವಶಗೊಳಿಸು; ಮರುಳು ಮಾಡು; ಮುಗ್ಧಗೊಳಿಸು; ಹೃದಯ ಸೂರೆಗೊಳ್ಳು; ಚಿತ್ತಾಪಹರಣ ಮಾಡು: his humorous anecdotes enthralled his companions ಅವನ ಹಾಸ್ಯಪೂರಿತ ಕಥೆಗಳು ಅವನ ಜೊತೆಗಾರರನ್ನು ಪರವಶಗೊಳಿಸಿದವು.