enterprise ಎಂಟರ್‍ಪ್ರೈಸ್‍
ನಾಮವಾಚಕ
  1. (ಮುಖ್ಯವಾಗಿ ಧೈರ್ಯವಾಗಿ ಯಾ ಕಷ್ಟದಿಂದ ಮಾಡಬೇಕಾದ) ಉದ್ಯಮ; ಸಾಹಸ; ಪ್ರಯತ್ನ: to keep the peace is a difficult enterprise ಶಾಂತಿಪಾಲನೆ ಮಾಡುವುದು ಕಷ್ಟದ ಸಾಹಸ.
  2. (ಸಾಹಸಕಾರ್ಯಗಳಲ್ಲಿ ತೊಡಗಲು ಬೇಕಾಗುವ) ಧೈರ್ಯ; ಸಾಹಸ; ಕೆಚ್ಚು; ದಿಟ್ಟತನ; ಉದ್ಯಮಶೀಲತೆ: he has no enterprise ಅವನಲ್ಲಿ ಸಾಹಸಮಾಡುವ ಧೈರ್ಯವಿಲ್ಲ.
  3. ಉದ್ಯಮ; ಯೋಜನೆ: his friends judged his novel enterprise to be impractical ಅತನ ಹೊಸಬಗೆಯ ಯೋಜನೆ ಅವ್ಯಾವಹಾರಿಕವೆಂದು ಅವನ ಸ್ನೇಹಿತರು ತೀರ್ಮಾನಿಸಿದರು. private enterprise is said to have yielded better results than government undertakings ಸರ್ಕಾರಿ ಸಂಸ್ಥೆಗಳಿಗಿಂತ ಖಾಸಗಿ ಉದ್ಯಮ ಉತ್ತಮ ಫಲ ನೀಡಿದೆಯೆಂದು ಹೇಳಲಾಗಿದೆ.
  4. ಸಾಹಸ; ಸಾಹಸಶೀಲತೆ; ಧೈರ್ಯಶೀಲತೆ; ಸಾಹಸಯೋಜನೆಗಳಲ್ಲಿ ತೊಡಗುವಿಕೆ ಯಾ ಭಾಗವಹಿಸುವಿಕೆ: our country was formed by the enterprise of resolute men ದೃಢಸಂಕಲ್ಪದ ಜನರ ಸಾಹಸದಿಂದ ನಮ್ಮ ದೇಶ ರೂಪುಗೊಂಡಿತು.
  5. ವ್ಯಾಪಾರಸಂಸ್ಥೆ; ವ್ಯವಹಾರಸಂಸ್ಥೆ; ವಾಣಿಜ್ಯ ಸಂಸ್ಥೆ: an old enterprise specializing in scientific instruments ವೈಜ್ಞಾನಿಕ ಸಲಕರಣೆಗಳಿಗೆ ಮೀಸಲಾದ ಒಂದು ಹಳೆಯ ವ್ಯಾಪಾರಸಂಸ್ಥೆ.