enter ಎಂಟರ್‍
ಸಕರ್ಮಕ ಕ್ರಿಯಾಪದ
  1. (ಸ್ಥಳ, ಕೋಣೆ, ಮೊದಲಾದವನ್ನು) ಪ್ರವೇಶಿಸು; ಒಳಹೊಗು; ಬರು.
  2. (ಮಾಂಸಖಂಡ ಮೊದಲಾದವನ್ನು) ಒಳಹೊಗು; ನಾಟು; ಪ್ರವೇಶಿಸು.
  3. (ಸೈನ್ಯ, ಧರ್ಮಸಂಸ್ಥೆ, ಮೊದಲಾದವಕ್ಕೆ) ಸೇರು; ಸೇರಿಕೊ; ಸದಸ್ಯನಾಗು.
  4. (ನಾಯಿಗೆ) ಆರಂಭ ಶಿಕ್ಷಣ ಕೊಡು.
  5. (ಕುದುರೆ) ಪಳಗಿಸು.
  6. (ಹೆಸರು, ವಿವರಣೆ, ಮೊದಲಾದವನ್ನು ಪಟ್ಟಿ, ಪುಸ್ತಕ, ಮೊದಲಾದವುಗಳಲ್ಲಿ) ಬರೆ; ಸೇರಿಸು; ದಾಖಲಿಸು; ದಾಖಲು ಮಾಡು; ನಮೂದಿಸು.
  7. (ಸ್ಪರ್ಧೆ, ಪಂದ್ಯ, ಮೊದಲಾದವುಗಳಲ್ಲಿ ಸ್ಪರ್ಧಿಸಲು ವ್ಯಕ್ತಿ ಮೊದಲಾದವರ) ಹೆಸರನ್ನು ಪಟ್ಟಿಯಲ್ಲಿ ಸೇರಿಸು; ದಾಖಲು ಮಾಡು; ಹೆಸರುಕೊಡು.
  8. (ವಿದ್ಯಾರ್ಥಿಗೆ ಯಾ ಒಂದು ಸಂಘದ ಸದಸ್ಯತ್ವಕ್ಕೆ) ಪ್ರವೇಶಕೊಡು; ಪ್ರವೇಶ ಕೊಡಿಸು: he entered himself as a clerk under a lawyer ಅವನು ಗುಮಾಸ್ತನಾಗಿ ಒಬ್ಬ ವಕೀಲನ ಕೆಳಗೆ ಸೇರಿದನು, ಪ್ರವೇಶ ದೊರಕಿಸಿಕೊಂಡನು.
  9. (ಪ್ರತಿಭಟನೆ, ವಿರೋಧ, ಮೊದಲಾದವನ್ನು) ಉದ್ಘೋಷಿಸು; ಪ್ರಕಟಿಸು.
  10. (ನ್ಯಾಯಾಲಯದ ವಿಧಿವತ್ತಾದ ಕ್ರಮದಲ್ಲಿ, ಚರ್ಚೆ ಮೊದಲಾದವುಗಳ ವರದಿಯಲ್ಲಿ) ಬರೆ; ನಮೂದಿಸು; ದಾಖಲಿಸು.
  11. ಸೇರು; ಹಿಡಿ; ತೊಡಗು; ಪ್ರವೃತ್ತನಾಗು: he entered the medical profession ಅವನು ವೈದ್ಯವೃತ್ತಿ ಹಿಡಿದ, ವೈದ್ಯವೃತ್ತಿಯಲ್ಲಿ ತೊಡಗಿದ.
  12. ಸಹಾನುಭೂತಿಯಿಂದ ಅರ್ಥ ಮಾಡಿಕೊ; ಭಾವಗ್ರಹಿಸು; ಭಾವದಲ್ಲಿ ಪಾಲುಗೊಳ್ಳು; ಸಹಾನುಭೂತಿ ತೋರು: enter the spirit of the play ನಾಟಕದ ಭಾವವನ್ನು ಗ್ರಹಿಸು.
  13. (ವಿಧಿವತ್ತಾಗಿ) ನಮೂದಿಸು; ನಿವೇದಿಸು; ಸಲ್ಲಿಸು; ದಾಖಲಿಸು: enter a bid for a contract ಗುತ್ತಿಗೆಗಾಗಿ ತನ್ನ ಸವಾಲು ಸಲ್ಲಿಸು.
ಅಕರ್ಮಕ ಕ್ರಿಯಾಪದ
  1. (ಸ್ಥಳ, ಕೊಠಡಿ, ಇತ್ಯಾದಿಗಳೊಳಕ್ಕೆ) ಬರು: may I enter? ನಾನು ಒಳಕ್ಕೆ ಬರಬಹುದೇ?
  2. (ನಾಟಕದಲ್ಲಿ, ರಂಗಸೂಚನೆಯಾಗಿ) ರಂಗಕ್ಕಿಳಿ; ರಂಗ ಪ್ರವೇಶಿಸು: Enter Rama ರಾಮನು ರಂಗಕ್ಕೆ ಪ್ರವೇಶಿಸುತ್ತಾನೆ.
  3. (ಪಂದ್ಯ ಮೊದಲಾದವುಗಳಲ್ಲಿ) ತಾನೂ ಒಬ್ಬ ಸ್ಪರ್ಧಿಯೆಂದು ಘೋಷಿಸು, ಸಾರು, ಉದ್ಘೋಷಿಸು.
  4. (ಶಾಲೆಗೆ) ಸೇರು; ಪ್ರವೇಶಪಡೆ.
ಪದಗುಚ್ಛ
  1. enter an appearance (ಸಭೆ ಮೊದಲಾದವುಗಳಲ್ಲಿ) ಕಾಣಿಸಿಕೊ; ಹಾಜರಾಗು.
  2. enter a protest (ಶಾಸನಸಭೆ ಮೊದಲಾದವುಗಳ ಕಾರ್ಯಕ್ರಮ ವರದಿಯಲ್ಲಿ) ವಿರೋಧ, ಪ್ರತಿಭಟನೆ ಯಾ ಆಕ್ಷೇಪಣೆಯನ್ನು ಬರೆ, ನಮೂದಿಸು, ದಾಖಲಿಸು.
  3. enter into
    1. (ಸಂಭಾಷಣೆ, ಸಂಬಂಧ, ಕರಾರು, ವಿಚಾರಣೆ, ಸಮಸ್ಯೆ, ಮೊದಲಾದವುಗಳ ವಿಷಯದಲ್ಲಿ) ತೊಡಗು; ಬೆಳಸು; ಮಾಡು; ಮಾಡಿಕೊ; ನಡೆಸು.
    2. (ಒಬ್ಬನ ಮನೋವೃತ್ತಿ, ಮೊದಲಾದವುಗಳ ವಿಷಯದಲ್ಲಿ) ಒಳಹೊಗು; ಭಾವ ಗ್ರಹಿಸು; ಇಂಗಿತ ತಿಳಿ; ಸೂಕ್ಷ್ಮ ತಿಳಿ; ಅನುಕಂಪ ತೋರು; ಸಹಾನುಭೂತಿ ತೋರು: I should enter into his feelings ನಾನು ಅವನ ಭಾವನೆಗಳನ್ನು ಒಳಹೊಕ್ಕು ಅರಿಯಬೇಕಾಗಿದೆ.
    3. (ಲೆಕ್ಕಾಚಾರಗಳು, ಯೋಜನೆಗಳು, ಮೊದಲಾದವುಗಳ ವಿಷಯದಲ್ಲಿ) ಸೇರಿರು; ಅಂತರ್ಗತವಾಗಿರು; ಅಂಶವಾಗಿರು; ಭಾಗವಾಗಿರು; ಅಡಕವಾಗಿರು: there is another factor that enters into this situation ಈ ಸಂದರ್ಭದಲ್ಲಿ ಇನ್ನೊಂದು ಅಂಶ ಸೇರುತ್ತದೆ.
    4. (ಮುಚ್ಚಳಿಕೆ, ಕೌಲು, ಕರಾರು, ಒಪ್ಪಂದ ಇವುಗಳಿಗೆ) ಒಳಪಡು; ಹೊಣೆಯಾಗಿರು; ಬದ್ಧವಾಗಿರು; ಒಳಗಾಗಿರು; ಕಟ್ಟುಬಿದ್ದಿರು.
    5. ಪ್ರಾರಂಭಿಸು; ಶುರುಮಾಡು; ತೊಡಗು: enter into a conversation with someone ಯಾರೊಡನೆಯೋ ಮಾತುಕತೆ ಪಾರ್ರಂಭಿಸು, ಮಾತುಕತೆಯಲ್ಲಿ ತೊಡಗು. enter into negotiations with a firm ವ್ಯಾಪಾರಿ ಸಂಸ್ಥೆಯೊಂದರ ಜೊತೆ ವ್ಯವಹಾರ ಶುರುಮಾಡು, ವ್ಯವಹಾರದಲ್ಲಿ ತೊಡಗು.
    6. ಪರೀಕ್ಷಿಸು; ಪರಿಶೀಲಿಸು: enter into details ವಿವರಗಳನ್ನು ಪರೀಕ್ಷಿಸು, ಪರಿಶೀಲಿಸಲು ತೊಡಗು.
  4. enter up
    1. (ಲೆಕ್ಕಪುಸ್ತಕ ಮೊದಲಾದವುಗಳಲ್ಲಿ) ಎಲ್ಲ ಬಾಬುಗಳನ್ನು ದಾಖಲು ಮಾಡಿಬಿಡು.
    2. = enter(6).
  5. enter (up)on
    1. (ಆಸ್ತಿ) ಸ್ವಾಧೀನ ಪಡಿಸಿಕೊ; ಆಸ್ತಿಯ ಸ್ವಾಮ್ಯ ಪಡೆ.
    2. ಅಧಿಕಾರವನ್ನು ವಹಿಸಿಕೊ.
    3. (ಕಾರ್ಯ, ಕಾಲ, ಯುಗ, ಇತ್ಯಾದಿ) ಆರಂಭಿಸು; ಪ್ರಾರಂಭಿಸು.
    4. (ವಿಷಯಕ್ಕೆ) ಕೈಹಚ್ಚು; ಪ್ರವರ್ತಿಸು; ವಿಷಯದ ಪ್ರತಿಪಾದನೆಗೆ, ನಿರೂಪಣೆಗೆ, ಪರಿಶೀಲನೆಗೆ — ಪ್ರಾರಂಭಿಸು, ತೊಡಗು.