entelechy ಇ(ಎ)ನ್‍ಟೆಲಕಿ
ನಾಮವಾಚಕ
  1. (ತತ್ತ್ವಶಾಸ್ತ್ರ) (ಅರಿಸ್ಟಾಟಲನ ಸಿದ್ಧಾಂತದ ಪ್ರಕಾರ) ಪರಿಪೂರ್ಣತೆ; ಪರಿಪೂರ್ಣಾವಸ್ಥೆ; ಪರಿಪೂರ್ಣರೂಪ; ಅಂತಶ್ಯಕ್ತಿಯ ಪರಿಪೂರ್ಣತಾಸಿದ್ಧಿ: the soul is the Form or the Entelechy of an organised body ಆತ್ಮವು ಸಂಘಟಿತ ದೇಹದ ರೂಪ ಯಾ ಪರಿಪೂರ್ಣಾವಸ್ಥೆ.
  2. ಯಾವುದಕ್ಕಾದರೂ ರೂಪವನ್ನೋ ಪರಿಪೂರ್ಣತೆಯನ್ನೋ ಕೊಡುವಂಥದು.
  3. ಆತ್ಮ (ದೇಹವಲ್ಲ).
  4. (ಲೈಬ್ನಿಟ್ಸ್‍ ಎಂಬ ತತ್ತ್ವಶಾಸ್ತ್ರಜ್ಞನ ಮತದಲ್ಲಿ) ಮೂಲಾಣು; ಅಪೃಥಕ್ಕರಣೀಯ ಪರಮಾಣು.