entangle ಇ(ಎ)ನ್‍ಟ್ಯಾಂಗ್‍ಲ್‍
ಸಕರ್ಮಕ ಕ್ರಿಯಾಪದ
  1. ಬಲೆಯಲ್ಲಿ ಬೀಳಿಸು, ಹಿಡಿದುಹಾಕು ಸಿಕ್ಕಿಸು.
  2. (ಮನುಷ್ಯ ಮೊದಲಾದವರನ್ನು) ಕಷ್ಟದಲ್ಲಿ, ತೊಂದರೆಯಲ್ಲಿ ಯಾ ಅನೈತಿಕ ವ್ಯವಹಾರದಲ್ಲಿ ಕೆಡವು, ತೊಡರಿಸು, ಬೀಳಿಸು, ಸಿಕ್ಕಿಸು: to be entangled by intrigues ಒಳಸಂಚುಗಳಿಂದಾಗಿ ಕಷ್ಟಕ್ಕೆ ಸಿಕ್ಕಿ.
  3. ಸಿಕ್ಕಾಗುವಂತೆ ಮಾಡು; ಗಜಿಬಿಜಿ ಮಾಡು; ಗೋಜುಮಾಡು; ಜಟಿಲಗೊಳಿಸು (ರೂಪಕವಾಗಿ ಸಹ).