See also 2entail
1entail ಇ(ಎ)ನ್‍ಟೇಲ್‍
ನಾಮವಾಚಕ
  1. ಅಪರಾಧೀನಾನುಭೋಗ; ಅಪಾರಾಧೀನಭೋಗ; ಭೂಮಿಕಾಣಿ, ಜಮೀನು, ಮೊದಲಾದವನ್ನು ಮನಸ್ವಿ ಪರಭಾರೆಮಾಡದಂತೆ, ಅನುಭೋಗಪರಂಪರೆಯನ್ನು ಮೊದಲೇ ನಿಷ್ಕರ್ಷೆ ಮಾಡುವುದು; ಪರಾಧೀನವಾಗದ, ಪರಭಾರೆಮಾಡಲಾಗದ ಏರ್ಪಾಡು.
  2. ಪರಾಧೀನ ಮಾಡಲಾಗದಂತೆ ನಿರ್ಷ್ಕರ್ಷೆ ಮಾಡಿದ ಭೂಮಿಕಾಣಿ, ಹಕ್ಕುಗಳು, ಸ್ವಾಮ್ಯ, ಬಾಧ್ಯತೆ, ಸ್ವಾಸ್ಥ್ಯ, ಮೊದಲಾದವು.
  3. (ರೂಪಕವಾಗಿ) (ಗುಣಾತಿಶಯ, ನಂಬಿಕೆ, ಮೊದಲಾದವುಗಳ) ಅನ್ವಯಾಗತ ಪ್ರಾಪ್ತಿ.
See also 1entail
2entail ಇ(ಎ)ನ್‍ಟೇಲ್‍
ಸಕರ್ಮಕ ಕ್ರಿಯಾಪದ
  1. ಅಪರಾಧೀನ ಭೋಗಗೊಳಿಸು; ಭೂಮಿಕಾಣಿ ಮೊದಲಾದವು ಪರಭಾರೆಯಾಗದಂತೆ ಅನುಭೋಗ ಕ್ರಮವನ್ನು ನಿಷ್ಕರ್ಷಿಸು.
  2. (ಒಬ್ಬನಿಗೆ ಒಂದು ವಸ್ತುವನ್ನು) ಪರಭಾರೆ ಮಾಡಲಾಗದಂತೆ (ದಾನ) ಕೊಡು.
  3. (ಒಬ್ಬನ ಮೇಲೆ) ಹೊರಿಸು; ಹಚ್ಚು; ಹೇರು; (ವೆಚ್ಚಕ್ಕೆ, ದುಡಿಮೆಗೆ ಒಬ್ಬನನ್ನು) ಒಳಪಡಿಸು, ಗುರಿಮಾಡು: success entails hard work ಜಯ ಲಭಿಸಲು ನಾವು ದುಡಿಮೆಗೆ ಒಳಪಡಲೇ ಬೇಕು.
  4. ಆವಶ್ಯಕಗೊಳಿಸು; ಅಗತ್ಯವಾಗಿಸು; ಬೇಕಾಗಿಸು: the work entails expense ಈ ಕೆಲಸಕ್ಕೆ ಖರ್ಚು ಅಗತ್ಯವಾಗುತ್ತದೆ.