ensue ಇ(ಎ)ನ್‍ಸ್ಯೂ
ಸಕರ್ಮಕ ಕ್ರಿಯಾಪದ

(ಬೈಬ್‍ಲ್‍) (ಪ್ರಾಚೀನ ಪ್ರಯೋಗ) ಹುಡುಕಿಕೊಂಡು ಹೋಗು; ಅರಸು; ಬಯಸು; ಆಶಿಸು: ensue virtue ಪುಣ್ಯವನ್ನರಸು.

ಅಕರ್ಮಕ ಕ್ರಿಯಾಪದ
  1. ಆಮೇಲೆ ಆಗು; ತರುವಾಯ ಒದಗು; ಅನುಕ್ರಮವಾಗಿ ಸಂಭವಿಸು: as the days ensued ದಿನಗಳು ಕಳೆದಂತೆ.
  2. ನಡೆ; ಜರುಗು; ಒದಗು; ಪರಿಣಾಮವಾಗಿ ಬರು; ಪರಿಣಮಿಸು: a battle of insults ensued from the meeting of the two women ಆ ಇಬ್ಬರು ಸ್ತ್ರೀಯರು ಸೇರಿದಾಗ ಬೈಗುಳದ ಕಾಳಗವೇ ನಡೆಯಿತು.