ensign ಇನ್‍ಸೈ(ಸ)ನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಅಧಿಕಾರ ಮೊದಲಾದವುಗಳ) ಲಾಂಛನ; ಪದಕ; ಬಿಲ್ಲೆ.
  2. (ಮುಖ್ಯವಾಗಿ ನಾವೆಯ) ಬಾವುಟ; ಧ್ವಜ; ಪತಾಕೆ.
  3. (ಮುಖ್ಯವಾಗಿ ಬ್ರಿಟಿಷ್‍ ನಾವೆಯಲ್ಲಿ) ಒಂದು ಮೂಲೆಯಲ್ಲಿ ಬ್ರಿಟನ್ನಿನ ರಾಷ್ಟ್ರಧ್ವಜದ ಲಾಂಛನವಿರುವ ಬಿಳಿಯ , ನೀಲಿಯ ಯಾ ಕೆಂಪು ಬಾವುಟ: white ensign (ಬ್ರಿಟಿಷ್‍) ರಾಯಲ್‍ ನೌಕಾದಳದ ಬಾವುಟ. blue ensign ನೌಕಾ ರಕ್ಷಣದಳ ಮೊದಲಾದವುಗಳ ಬಾವುಟ. red ensign ವಾಣಿಜ್ಯನೌಕೆಗಳ ಬಾವುಟ.
  4. ಧ್ವಜಧಾರಿ; ಬಾವುಟಿಗ; ಬಾವುಟ ಹೊತ್ತಿರುವವನು.
  5. (ಬ್ರಿಟಿಷ್‍ ಪ್ರಯೋಗ) ಬಾವುಟದ ಸಿಪಾಯಿ; ಪದಾತಿದಳದ ಅತಿ ಕೆಳದರ್ಜೆಯ ಅಧಿಕಾರಿ.
  6. (ಅಮೆರಿಕನ್‍ ಪ್ರಯೋಗ) ಅತ್ಯಂತ ಕೆಳದರ್ಜೆಯ ನೌಕಾಧಿಕಾರಿ.