ensemble ಆನ್‍ಸಾಂಬ್‍ಲ್‍
ನಾಮವಾಚಕ
  1. (tout ensemble ಕೂಡ) ಸಮಷ್ಟಿ; ಒಟ್ಟು; ಸಮಗ್ರ; (ಪ್ರತ್ಯೇಕ ಭಾಗಗಳನ್ನು ಗಮನಿಸದೆ) ಒಟ್ಟಾಗಿ, ಸಮಗ್ರವಾಗಿ ಪರಿಶೀಲಿಸಿದುದು.
  2. ಸಮಗ್ರ ಪರಿಣಾಮ; ಒಟ್ಟಿನ ಫಲ; ಒಟ್ಟು ಪ್ರಭಾವ.
  3. (ಸಂಗೀತ) ಮೇಳಭಾಗ; ಗಾಯಕರೆಲ್ಲರೂ ಒಟ್ಟಿಗೆ ಸೇರಿ ನುಡಿಸುವ, ಹಾಡುವ ಸಂಗೀತಭಾಗ: good ensemble ಅಂಥ ಭಾಗವನ್ನು ಒಟ್ಟಾಗಿ ಹಾಡುವಾಗ ಯಾ ನುಡಿಸುವಾಗ ಧ್ವನಿ, ಸ್ವರಗಳನ್ನು ಸಮತೋಲನಗೊಳಿಸುವುದು.
  4. (ಸಂಗೀತ) ಮೇಳ; ಒಟ್ಟಿಗೆ ನುಡಿಸುವ ಯಾ ಹಾಡುವ ಸಂಗೀತಗಾರರ ಗುಂಪು: a string ensemble ತಂತಿವಾದಕರ ತಂಡ.
  5. (ಬ್ಯಾಲೆ ನರ್ತನ, ಸಂಗೀತರೂಪಕ, ಮೊದಲಾದವುಗಳಲ್ಲಿನ) ಸಹಾಯಕ ನರ್ತಕರ ಯಾ ನಟರ ತಂಡ.
  6. (ಪರಸ್ಪರ ಹೊಂದುವಂಥ) ಹೆಂಗಸಿನ ಉಡುಪು, ಉಡಿಗೆ.
  7. (ಗಣಿತ) ಸಮಷ್ಟಿ; ಒಂದೇ ಯೋಜನೆಯುಳ್ಳ, ಆದರೆ ಬಹುಶಃ ಬೇರೆ ಬೇರೆ ಸ್ಥಿತಿಗಳಲ್ಲಿರುವ ವ್ಯವಸ್ಥೆಗಳ ತಂಡ.