enrol ಇ(ಎ)ನ್‍ರೋಲ್‍
ಕ್ರಿಯಾಪದ
(ವರ್ತಮಾನ ಕೃದಂತ enrolling, ಭೂತರೂಪ ಮತ್ತು ಭೂತಕೃದಂತ enrolled).
ಸಕರ್ಮಕ ಕ್ರಿಯಾಪದ
  1. (ಪಟ್ಟಿಯಲ್ಲಿ, ಮುಖ್ಯವಾಗಿ ಸೈನಿಕರ ಪಟ್ಟಿಯಲ್ಲಿ ಒಬ್ಬನ) ಹೆಸರು ಬರೆ, ಸೇರಿಸು, ದಾಖಲುಮಾಡು.
  2. (ಸಂಘ ಮೊದಲಾದವುಗಳಲ್ಲಿ ಒಬ್ಬನನ್ನು ಸದಸ್ಯನ್ನಾಗಿ) ಸೇರಿಸಿಕೊ; ಸದಸ್ಯನನ್ನಾಗಿಸು.
  3. (ಚರಿತ್ರೆ) (ದಸ್ತಾವೇಜು, ಪತ್ರ, ಮೊದಲಾದವನ್ನು ನ್ಯಾಯಸ್ಥಾನದ ದಾಖಲೆಪುಸ್ತಕದಲ್ಲಿ, ದಫ್ತರದಲ್ಲಿ) ದಾಖಲು ಮಾಡು.
  4. ನಿರೂಪಿಸು; ಉಲ್ಲೇಖಿಸು; ಬರೆದಿಡು: to enrol the minutes of a meeting ಸಭೆಯ ಕಾರ್ಯಕಲಾಪಗಳ ಟಿಪ್ಪಣಿ ಬರೆಯುವುದು.
  5. ಪ್ರಶಂಸಿಸು; ಸುವರ್ಣಾಕ್ಷರಗಳಲ್ಲಿ ಬರೆ; ಶ್ಲಾಘಿಸು; ಪ್ರಶಸ್ತಿಗೊಳಿಸು: enrol the great events of history ಇತಿಹಾಸದ ಮಹಾಘಟನೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡು.
  6. ಸುರುಳಿ ಸುತ್ತು; ಸುತ್ತಿಡು.
ಅಕರ್ಮಕ ಕ್ರಿಯಾಪದ

(ಒಬ್ಬನ ಹೆಸರು ಮೊದಲಾದವು ಪಟ್ಟಿಯಲ್ಲಿ) ದಾಖಲೆಯಾಗು; ಸೇರಿಕೊ.