enrich ಇ(ಎ)ನ್‍ರಿಚ್‍
ಸಕರ್ಮಕ ಕ್ರಿಯಾಪದ
  1. ಹಣವಂತನನ್ನಾಗಿ ಮಾಡು; ಸಿರಿವಂತನನ್ನಾಗಿ ಮಾಡು; ಐಶ್ವರ್ಯವಂತನನ್ನಾಗಿಸು; ಶ್ರೀಮಂತಗೊಳಿಸು.
  2. (ವಸ್ತುಸಂಗ್ರಹ, ವಿವಿಧ ವಸ್ತುಪ್ರದರ್ಶನ, ಗ್ರಂಥ, ಮೊದಲಾದವುಗಳಿಗೆ) ಇನ್ನಷ್ಟು ಸೇರಿಸು; ಹೆಚ್ಚಿಸು; ಅಭಿವೃದ್ಧಿಮಾಡು.
  3. (ಗುಣ, ರುಚಿ, ಮೊದಲಾದವುಗಳನ್ನು) ಹೆಚ್ಚಿಸು; ಅಧಿಕಗೊಳಿಸು; ಉತ್ತಮಗೊಳಿಸು; ಶ್ರೀಮಂತವಾಗಿಸು; ಸಿರಿವಂತಗೊಳಿಸು; ಪುಷ್ಟಿಗೊಳಿಸು; ಸಂಪದ್ಯುಕ್ತ ಮಾಡು; ಸಮೃದ್ಧಗೊಳಿಸು.
  4. ಪುಷ್ಟೀಕರಿಸು; ನೈಸರ್ಗಿಕ ಧಾತುವೊಂದರಲ್ಲಿರುವ ಅಪೇಕ್ಷಿತ ಐಸೋಟೋಪ್‍ನ ಪ್ರಮಾಣವನ್ನು ಹೆಚ್ಚಿಸು: enrich uranium for use in the reactor ಕ್ರಿಯಾಕಾರಿಯಲ್ಲಿ ಉಪಯೋಗಿಸುವುದಕ್ಕಾಗಿ ಯುರೇನಿಯಮ್ಮನ್ನು ಪುಷ್ಟೀಕರಿಸು, ಅದರಲ್ಲಿನ ${\rm U}-235$ ಐಸೋಟೋಪಿನ ಪ್ರಮಾಣವನ್ನು ಹೆಚ್ಚಿಸು.