enlighten ಇ(ಎ)ನ್‍ಲೈಟನ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ ಒಂದು ವಿಷಯದಲ್ಲಿ) ತಿಳಿಯ ಹೇಳು; ತಿಳುವಳಿಕೆ ಕೊಡು; ತಿಳಿಸು.
  2. (ಕಾವ್ಯಪ್ರಯೋಗ) (ಒಂದು ವಸ್ತುವಿನ ಮೇಲೆ) ಬೆಳಕು ಚೆಲ್ಲು; ಪ್ರಕಾಶ ಹರಿಸು.
  3. (ರೂಪಕವಾಗಿ) (ವ್ಯಕ್ತಿಗೆ ಜ್ಞಾನ, ಅರಿವು, ಮೊದಲಾದವುಗಳ) ಬೆಳಕುಕೊಡು; ಅರಿವುಂಟುಮಾಡು; (ವ್ಯಕ್ತಿಯನ್ನು) ಪ್ರಬೋಧಿಸು; (ವ್ಯಕ್ತಿಗೆ) ಜ್ಞಾನೋದಯ ಉಂಟುಮಾಡು.
  4. (ಮುಖ್ಯವಾಗಿ ಭೂತಕೃದಂತದಲ್ಲಿ) (ವ್ಯಕ್ತಿಯನ್ನು ಪೂರ್ವಗ್ರಹದಿಂದ, ಮೂಢನಂಬಿಕೆಯಿಂದ) ಬಿಡುಗಡೆಮಾಡು; ವಿಮುಕ್ತ ಮಾಡು; ವಿಮೋಚನೆಗೊಳಿಸು: enlightened culture ಪ್ರಬುದ್ಧ ಸಂಸ್ಕೃತಿ; ಮೂಢನಂಬಿಕೆ, ಪೂರ್ವಗ್ರಹ, ಮೊದಲಾದವುಗಳಿಂದ ವಿಮುಕ್ತವಾದ ಸಂಸ್ಕೃತಿ.