enlarge ಇ(ಎ)ನ್‍ಲಾರ್ಜ್‍
ಸಕರ್ಮಕ ಕ್ರಿಯಾಪದ
  1. ಹೆಚ್ಚಿಸು; ಬೆಳೆಸು; ಬಡಾಯಿಸು; ವರ್ಧಿಸು; ದೊಡ್ಡದಾಗಿಸು.
  2. ವಿಶಾಲವಾಗಿಸು; ವಿಸ್ತಾರವಾಗಿಸು; ವಿಸ್ತರಿಸು.
  3. (ಮನಸ್ಸು, ಹೃದಯ, ಭಾವನೆಗಳು ಇವನ್ನು) ವಿಶಾಲಗೊಳಿಸು; ವಿಸ್ತಾರಗೊಳಿಸು; ಹಿಗ್ಗಿಸು; ದೊಡ್ಡದು ಮಾಡು.
  4. (ಪ್ರಾಚೀನ ಪ್ರಯೋಗ) ಬಿಡುಗಡೆಮಾಡು; ವಿಮೋಚಿಸು; ಸೆರೆಬಿಡಿಸು: enlarge a captive ಬಂದಿಯನ್ನು ಸೆರೆಬಿಡಿಸು.
  5. (ಛಾಯಾಚಿತ್ರಣ) ವರ್ಧಿಸು; ದೊಡ್ಡದಾಗಿಸು; ದೊಡ್ಡ ಪ್ರಮಾಣಕ್ಕೆ ಬೆಳೆಸು.
ಅಕರ್ಮಕ ಕ್ರಿಯಾಪದ
  1. ದೊಡ್ಡದಾಗು; ವರ್ಧಿಸು; ಹಿಗ್ಗು; ಉಬ್ಬು; ಬೆಳೆ: the embryo gradually enlarges ಭ್ರೂಣವು ಕ್ರಮೇಣ ಬೆಳೆಯುತ್ತದೆ.
  2. ವಿಸ್ತರಿಸು; ವಿಶಾಲವಾಗು; ವಿಸ್ತಾರವಾಗು; ಹರಡು; ಹರಡಿಕೊ.
  3. (ಒಂದು ವಿಷಯದ ಬಗ್ಗೆ) ವಿಸ್ತರಿಸು; ವಿವರಿಸು; ಬೆಳಸು: these gentlemen can enlarge upon the scheme mentioned ಸದರಿ ಯೋಜನೆಯನ್ನು ಕುರಿತು ಈ ಮಹನೀಯರು ವಿವರಿಸಬಲ್ಲರು.