engross ಇ(ಎ)ನ್‍ಗ್ರಾಸ್‍
ಸಕರ್ಮಕ ಕ್ರಿಯಾಪದ
  1. (ದಸ್ತಾವೇಜನ್ನು) ದಪ್ಪಕ್ಷರಗಳಲ್ಲಿ ಬರೆ.
  2. ಕಾನೂನಿಗನುಗುಣವಾದ ರೂಪದಲ್ಲಿ ಹೇಳು, ಬರೆ.
  3. ಏಕಸ್ವಾಮ್ಯ ಹೊಂದಲು (ಧಾನ್ಯ ಮೊದಲಾದವುಗಳ) ಇಡೀ ದಾಸ್ತಾನನ್ನು ಕೊಂಡುಬಿಡು.
  4. (ಪ್ರಾಚೀನ ಪ್ರಯೋಗ) (ಸಂಭಾಷಣೆ ಮೊದಲಾದವನ್ನು) ಯಾರೊಬ್ಬರಿಗೂ ಎಡೆಗೊಡದೆ ಆಕ್ರಮಿಸಿಕೊ.
  5. (ಮುಖ್ಯವಾಗಿ ಭೂತಕೃದಂತದಲ್ಲಿ) (ವ್ಯಕ್ತಿ, ಗಮನ, ಕಾಲ, ಮೊದಲಾದವುಗಳ ವಿಷಯದಲ್ಲಿ) ಮುಳುಗಿಸು; ಮಗ್ನವಾಗಿಸು; ತಲ್ಲೀನಗೊಳಿಸು: engrossed in (subject etc.) (ವಿಷಯ ಮೊದಲಾದಗಳಲ್ಲಿ) ಮುಳುಗಿಹೋಗಿ; ಮಗ್ನವಾಗಿ; ತಲ್ಲೀನವಾಗಿ.