engraving ಇ(ಎ)ನ್‍ಗ್ರೇವಿಂಗ್‍
ನಾಮವಾಚಕ
  1. (ಮೇಲ್ಮೈಯ ಮೇಲೆ) ಕೆತ್ತನೆ; ಕೆತ್ತುವುದು; ಕೊರೆಯುವುದು, ಚಿತ್ರಿಸುವುದು; ನಕಾಸೆ ಮಾಡುವುದು.
  2. ನಕಾಸೆಕಲೆ; ನಕಾಸೆ ಕೆತ್ತನೆ; ನಕಾಸೆ ಚಿತ್ರಣ; ಕೆತ್ತಿ — ಕೊರೆದು, ದ್ರಾವಣ ಸುರಿದು, ಹೋಟೋಗ್ರಹಿ ವಿಧಾನ, ಮೊದಲಾದವುಗಳ ಮೂಲಕ ಲೋಹದ ತಗಡು, ಮರದ ಹಲಗೆ, ಮೊದಲಾದವುಗಳ ಮೇಲ್ಮೈ ಮೇಲೆ ನಕಾಸೆ, ಚಿತ್ರ ಮೂಡಿಸುವ ಕಲೆ.
  3. ಪಡಿಯಚ್ಚು ಕೆತ್ತನೆ.
  4. ನಕಾಸೆ ಪಡಿಯಚ್ಚು; ನಕಾಸೆ ಕೆತ್ತಿದ ಪಡಿಯಚ್ಚು.
  5. ಪಡಿಯಚ್ಚಿನಲ್ಲಿ ಕೆತ್ತಿದ ನಕಾಸೆ, ಚಿತ್ರ.
  6. (ಮುಖ್ಯವಾಗಿ) ಕೆತ್ತನೆ; ನಕಾಸೆ; ಕೆತ್ತನೆ ಮಾಡಿದ ತಗಡಿನಿಂದ ತೆಗೆದ ಚಿತ್ರ, ಆಕೃತಿ, ಮೊದಲಾದವುಗಳ ಪ್ರತಿ.