engird ಇ(ಎ)ನ್‍ಗರ್ಡ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ engirding, ಭೂತರೂಪ ಮತ್ತು ಭೂತಕೃದಂತ engirded ಯಾ engirt).
  1. ನಡುಪಟ್ಟಿ ಸುತ್ತು; ಟೊಂಕಪಟ್ಟಿ ಕಟ್ಟು.
  2. (ನಡುಪಟ್ಟಿಯಂತೆ) ಸುತ್ತುವರಿ; ಬಳಸು; ಆವರಿಸು (ರೂಪಕವಾಗಿ ಸಹ): the mountain tops engird the horizon in ಪರ್ವತಾಗ್ರಗಳು ದಿಗಂತವನ್ನು ಬಳಸಿಕೊಂಡಿವೆ. ugly darkness engirt with tempests ಬಿರುಗಾಳಿ ಆವರಿಸಿದ ಕಗ್ಗತ್ತಲೆ.