engagement ಇಂ(ಎಂ)ಗೇಜ್‍ಮಂಟ್‍
ನಾಮವಾಚಕ
  1. ವಿಧಿವತ್ತಾದ ವಾಗ್ದಾನ; ಒಪ್ಪಂದ; ಗೊತ್ತುಪಾಡು; ಕರಾರು.
  2. ಭೇಟಿಯ ನಿಶ್ಚಯ; ಯಾವುದೇ ಉದ್ದೇಶ, ಉತ್ಸವ, ಮೊದಲಾದವುಗಳಿಗಾಗಿ ಇನ್ನೊಬ್ಬರನ್ನು ಭೇಟಿಯಾಗಲು ಮಾಡಿಕೊಂಡ ನಿಶ್ಚಯ.
  3. (ವಾಣಿಜ್ಯ) (ಬಹುವಚನದಲ್ಲಿ) ಪಾವತಿ ವಾಗ್ದಾನ; ಪಾವತಿ ಮಾಡುವುದಾಗಿ ಕೊಟ್ಟ ವಾಗ್ದಾನ.
  4. (ಬಹುವಚನದಲ್ಲಿ) (ವಾಣಿಜ್ಯ) ಹಣಕಾಸಿನ ಹೊಣೆಗಳು; ಸಾಲಸೋಲಗಳು: to meet one’s engagements ಹಣಕಾಸಿನ ಹೊಣೆಗಳನ್ನು ಸಲ್ಲಿಸುವುದಕ್ಕಾಗಿ.
  5. ನಿಶ್ಚಿತಾರ್ಥ; ವಿವಾಹದ ಒಡಂಬಡಿಕೆ, ನಿಶ್ಚಯ.
  6. ನೌಕರಿ; ಉದ್ಯೋಗ; ಸಂಬಳ ಯಾ ಕಂಬಳಕ್ಕಾಗಿ ಕೆಲಸಮಾಡಲು ನೇಮಕಗೊಂಡಿರುವ ಹುದ್ದೆ.
  7. (ಯಾವುದೇ ಕೆಲಸದಲ್ಲಿ) ತೊಡಗಿರುವುದು; ನಿರತನಾಗಿರುವುದು.
  8. ಗಮನವನ್ನೆಲ್ಲ ತೆಗೆದುಕೊಳ್ಳುವ ಯಾವುದೇ ಕೆಲಸ.
  9. (ಕತ್ತಿವರಸೆ) ಕತ್ತಿಗೆ (ಅಡ್ಡವಾಗಿ) ಕತ್ತಿ ಒಡ್ಡುವುದು.
  10. ಹೋರಾಟ; ಕದನದಲ್ಲಿ ತೊಡಗಿರುವುದು.
  11. ಕದನ; ಕಾಳಗ.
  12. (ಪ್ರಾಚೀನ ಪ್ರಯೋಗ) ದ್ವಂದ್ವಯುದ್ಧ.
  13. ನೈತಿಕಬದ್ಧತೆ; ನೈತಿಕಹೊಣೆ.
  14. (ಯಂತ್ರಭಾಗಗಳು) ಕೂಡಿಕೊಳ್ಳುವುದು ಯಾ ಕೂಡಿಕೊಂಡಿರುವುದು; ಸೇರ್ಪಡೆ; ತೊಡರು.