See also 2engage
1engage ಇಂ(ಎಂ)ಗೇಜ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಕೆಲಸ ಮಾಡುವುದು, ಉಪನ್ಯಾಸ ನೀಡುವುದು, ಮೊದಲಾದವನ್ನು ಕರಾರಿನಿಂದ) ಬಂಧಿಸು; ಕಟ್ಟು ಮಾಡು; ಬದ್ಧವಾಗಿಸು; ಕಟ್ಟಿಗೊಳಪಡಿಸು; ನಿರ್ಬಂಧಪಡಿಸು.
  2. (ಮುಖ್ಯವಾಗಿ ಮದುವೆಯ ವಿಷಯದಲ್ಲಿ) ವಾಗ್ದಾನದಿಂದ ಕಟ್ಟಿಗೊಳಪಡಿಸು, ಬದ್ಧವಾಗಿಸು; ಗೊತ್ತುಪಡಿಸು: engaged couple ಮದುವೆ ಗೊತ್ತಾದ ಹೆಣ್ಣುಗಂಡು.
  3. (ನೌಕರನನ್ನು, ಆಳನ್ನು) ಸಂಬಳಕ್ಕಿಟ್ಟುಕೊ; ಕೆಲಸಕ್ಕಿಟ್ಟುಕೊ.
  4. (ಕೂರುವ ಜಾಗ, ಗಾಡಿ, ಮೊದಲಾದವನ್ನು) ಮುಂಚಿತವಾಗಿ ಗೊತ್ತುಮಾಡಿಕೊ; ಕಾಯ್ದಿರಿಸಿಕೊ.
  5. ಆಕರ್ಷಿಸು; ಪ್ರಿಯವಾಗು; ರುಚಿಸು; ಹಿಡಿಸು; ಇಷ್ಟವಾಗು; ಪ್ರೀತಿ ಹುಟ್ಟಿಸು: his good manners engaged everyone ಅವನ ಸನ್ನಡತೆ ಎಲ್ಲರಲ್ಲೂ ಪ್ರೀತಿಹುಟ್ಟಿಸುತ್ತದೆ, ಎಲ್ಲರನ್ನೂ ಆಕರ್ಷಿಸುತ್ತದೆ. books that could engage their childhood pleased them at a riper age ಬಾಲ್ಯದಲ್ಲಿ ಅವರ ಮನಸೆಳೆದ ಪುಸ್ತಕಗಳು ಪಕ್ವವಾದ ವಯಸ್ಸಿನಲ್ಲೂ ಅವರನ್ನು ಸಂತೋಷಪಡಿಸಿದುವು.
  6. (ವಾಸ್ತುಶಿಲ್ಪ) ಕಂಬವನ್ನು ಗೋಡೆಯೊಳಕ್ಕೆ ಸೇರಿಸು, ಹುದುಗಿಸು.
  7. (ಯಂತ್ರಗಳ ವಿಷಯದಲ್ಲಿ) (ಒಂದು ಭಾಗವನ್ನು ಮತ್ತೊಂದರೊಡನೆ) ತೊಡರಿಸು; ಕೂಡಿಸು; ತಗುಲಿಸು; ಸೇರಿಸು; ಹಲ್ಲುಹಲ್ಲುಗೂಡಿಸು.
  8. (ಗಮನ) ಸೆಳೆದು ಹಿಡಿ; ಹಿಡಿದು ನಿಲ್ಲಿಸು: engage one’s attention ಗಮನ (ಸೆಳೆದು) ಹಿಡಿ.
  9. (ಸಾಮಾನ್ಯವಾಗಿ ಕರ್ಮಣಿಪ್ರಯೋಗ) (ಕಾರ್ಯದಲ್ಲಿ) ತೊಡಗಿರು; ಮಗ್ನನಾಗಿರು; ಉದ್ಯುಕ್ತನಾಗಿರು; ನಿರತನಾಗಿರು: be engaged in study ವ್ಯಾಸಂಗದಲ್ಲಿ ನಿರತನಾಗಿರು.
  10. (ಸೇನೆಯ ಪಡೆಗಳನ್ನು) ಕದನದಲ್ಲಿ ತೊಡಗಿಸು.
  11. (ಶತ್ರು ಮೊದಲಾದವರೊಡನೆ) ಕದನಕ್ಕಿಳಿ; ಹೋರಾಟಕ್ಕಿಳಿಸು; ಹೋರಾಟ ಶುರುಮಾಡು; ಯುದ್ಧ ಆರಂಭಿಸು.
  12. (ಕತ್ತಿವರಸೆಗಾರರು ಮೊದಲಾದವರ ವಿಷಯದಲ್ಲಿ) ಆಯುಧಗಳನ್ನು ತೊಡರಿಸು, ತೆಕ್ಕೆ ಹಾಕಿಸು.
ಅಕರ್ಮಕ ಕ್ರಿಯಾಪದ
  1. ಮಾಡುವೆನೆಂದು ಮಾತುಕೊಡು; ಭರವಸೆಕೊಡು; ವಾಗ್ದಾನಮಾಡು; ವಚನಕೊಡು; ಭಾಷೆಕೊಡು.
  2. (ರಾಜನೀತಿ ಮೊದಲಾದವುಗಳಲ್ಲಿ) ತೊಡಗು; ಪ್ರವೃತ್ತನಾಗು; ಪ್ರವೇಶಿಸು; ಇಳಿ: engage in politics ರಾಜಕೀಯಕ್ಕೆ ಇಳಿ; ರಾಜಕೀಯದಲ್ಲಿ ತೊಡಗು.
  3. (ಸೇನಾದಳಗಳು ಮೊದಲಾದವುಗಳ ವಿಷಯದಲ್ಲಿ) ಶತ್ರುವಿನೊಡನೆ ಕದನದಲ್ಲಿ ತೊಡಗು.
  4. (ಯಂತ್ರಭಾಗದ ವಿಷಯದಲ್ಲಿ) (ಇನ್ನೊಂದರೊಡನೆ) ತಗುಲಿಕೊ; ಸೇರಿಸಿಕೊ; ಕೂಡಿಕೊ: the two cogwheels engaged ಎರಡು ಹಲ್ಲುಚಕ್ರಗಳೂ ಕೂಡಿಕೊಂಡವು.
ಪದಗುಚ್ಛ
  1. be engaged (in) (ಒಂದು ಕೆಲಸದಲ್ಲಿ) ತೊಡಗಿರು; ಮಗ್ನನಾಗಿರು; ಪ್ರವೃತ್ತನಾಗಿರು: be engaged in writing a play ನಾಟಕ ಬರೆಯುವುದರಲ್ಲಿ ತೊಡಗಿರು. be engaged in business ವ್ಯಾಪಾರದಲ್ಲಿ ತೊಡಗಿರು.
  2. engaged for (ಪ್ರಾಚೀನ ಪ್ರಯೋಗ) ವಾಗ್ದಾನಮಾಡು; ಭರವಸೆ ಕೊಡು; ಗ್ಯಾರಂಟಿಕೊಡು; ಖಾತರಿಕೊಡು.
  3. engage in (ಒಂದು ಕೆಲಸದಲ್ಲಿ) ತೊಡಗು; ಭಾಗವಹಿಸು; ಪ್ರವೃತ್ತನಾಗು.
See also 1engage
2engage ಆಂಗ್ಯಾಷೇ
ಗುಣವಾಚಕ
French

(ಲೇಖಕ ಮೊದಲಾದವರ ವಿಷಯದಲ್ಲಿ) ನೈತಿಕವಾಗಿ ಬದ್ದನಾದ; ನೈತಿಕ ಕಟ್ಟಿಗೊಳಗಾಗಿರುವ.