enfranchisement ಇ(ಎ)ನ್‍ಹ್ರಾನ್ಚಿಸ್‍ಮಂಟ್‍
ನಾಮವಾಚಕ
  1. (ದಾಸ್ಯ, ಸೆರೆ, ನಿರ್ಬಂಧದ ತೆರಿಗೆ, ಕಾಯಿದೆಯ ಹೊಣೆಗಳು, ರಾಜಕೀಯ ದಾಸ್ಯ, ಮೊದಲಾದವುಗಳಿಂದ) ಬಿಡುಗಡೆ; ವಿಮೋಚನೆ; ವಿಮುಕ್ತಿ; ಸ್ವತಂತ್ರಗೊಂಡ ಸ್ಥಿತಿ.
  2. (ಪಟ್ಟಣದ ವಿಷಯದಲ್ಲಿ) ಪೌರಹಕ್ಕುಗಳನ್ನು ಪಡೆಯುವಿಕೆ; (ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ) ಪ್ರಾತಿನಿಧ್ಯ ಪಡೆಯುವಿಕೆ.
  3. (ವ್ಯಕ್ತಿಯ ವಿಷಯದಲ್ಲಿ) ಚುನಾವಣೆಯ ಹಕ್ಕು ಪಡೆಯುವಿಕೆ.