energy ಎನರ್ಜಿ
  1. ಬಲ; ಶಕ್ತಿ; ಆಪು; ಕಸವು; ಅಳವು.
  2. (ವ್ಯಕ್ತಿ, ಭಾಷಣ, ಕಾರ್ಯ, ಮೊದಲಾದವುಗಳ ವಿಷಯದಲ್ಲಿ) ವೀರ್ಯ; ಸಾಮರ್ಥ್ಯ; ಚೈತನ್ಯ; ಓಜಸ್ಸು.
  3. ಕಾರ್ಯಾಚರಣೆ; ಕಾರ್ಯದಲ್ಲಿ ತೊಡಗಿರುವಿಕೆ; ಕಾರ್ಯನಿರತತೆ; ಕಾರ್ಯೋದ್ಯುಕ್ತತೆ.
  4. (ಬಹುವಚನದಲ್ಲಿ) (ಕಾರ್ಯದಲ್ಲಿ ಬಳಸುವ ವೈಯಕ್ತಿಕ) ಶಕ್ತಿಸಾಮರ್ಥ್ಯಗಳು: devote your energies to this ಇದಕ್ಕಾಗಿ ನಿನ್ನ ಶಕ್ತಿಸಾಮರ್ಥ್ಯಗಳನ್ನೆಲ್ಲ ಅರ್ಪಿಸು.
  5. (ಪ್ರಾಚೀನ ಪ್ರಯೋಗ) (ಅಡಗಿರುವ) ಶಕ್ತಿ; ಸಾಮರ್ಥ್ಯ; ಯೋಗ್ಯತೆ; ಸುಪ್ತಶಕ್ತಿ.
  6. (ಭೌತವಿಜ್ಞಾನ) (ಪದಾರ್ಥಗಳ) ಶಕ್ತಿ; ಕ್ರಿಯೆಯನ್ನು ನಡೆಸಬಲ್ಲ ಶಕ್ತಿ.
  7. ಶಕ್ತಿ; ಕ್ರಿಯೆ ನಡೆಸುವ ಸಾಧನ: energy needed for transport ಸಾಗಣೆಗೆ ಅಗತ್ಯವಾಗುವ ಶಕ್ತಿ.
  8. ಶಕ್ತಿ; ಪದಾರ್ಥ ಯಾ ವಿಕಿರಣವನ್ನು ಉಪಯೋಗಿಸಿಕೊಂಡು ಕೆಲಸಮಾಡಿಸುವ ರೀತಿ: the country’s energy requirements ದೇಶದ ಶಕ್ತಿಯ ಆವಶ್ಯಕತೆಗಳು.