enema ಎನಿಮ, ಇನೀಮ
ನಾಮವಾಚಕ
(ಬಹುವಚನ enemas, ಯಾ enemata ಉಚ್ಚಾರಣೆ, ಇನೆಮಟ).

(ವೈದ್ಯಶಾಸ್ತ್ರ) ಎನಿಮ:

  1. ಮಲ ಕಟ್ಟಿಕೊಂಡಾಗ ಮಲವಿಸರ್ಜನೆ ಮಾಡಿಸಲು ಯಾ ಪರೀಕ್ಷೆಗಾಗಿ ಮಲದ್ವಾರದ ಮೂಲಕ ಕರುಳಿನೊಳಕ್ಕೆ ದ್ರವವನ್ನು ಪಿಚಕಾರಿಯಿಂದ ಹೊಡೆಯುವುದು.
  2. ಇದಕ್ಕೆ ಉಪಯೋಗಿಸುವ ಪಿಚಕಾರಿ, ಸಿರಿಂಜು.
  3. ಇದಕ್ಕೆ ಉಪಯೋಗಿಸುವ ದ್ರವ.