endure ಇ(ಎ)ನ್‍ಡ್ಯುಅರ್‍
ಸಕರ್ಮಕ ಕ್ರಿಯಾಪದ
  1. (ನೋವು ಮೊದಲಾದವನ್ನು) ತಾಳಿಕೊ; ವಹಿಸು; ಅನುಭವಿಸು.
  2. ಒಳಗಾಗು; ಅಧೀನವಾಗು; ಬಗ್ಗು: Brutus, bait not me, I’ll not endure it ಬ್ರೂಟಸ್‍, ನನ್ನನ್ನು ಕೆಣಕಬೇಡ, ನಾನದಕ್ಕೆ ಬಗ್ಗುವುದಿಲ್ಲ.
  3. (ನಿಷೇಧಾರ್ಥದಲ್ಲಿ) (ಯಾವುದನ್ನೇ ಮಾಡಲು) ಸಹಿಸು: how can I endure to see the evil that shall come to my people? ನನ್ನ ಜನತೆಗೆ ಬಂದೇ ತೀರುವ ಕೇಡನ್ನು ಹೇಗೆ ಸಹಿಸಲಿ? ನೋಡಿಕೊಂಡಿರಲಿ?
ಅಕರ್ಮಕ ಕ್ರಿಯಾಪದ
  1. ತಾಳಿಕೊ; ಸಹಿಸು; ಅನುಭವಿಸು: endure to the bitter end ಸಹನೆಗೆ ಮೀರಿದರೂ ಕೊನೆಯವರೆಗೂ ತಾಳಿಕೊ.
  2. ಅಸ್ತಿತ್ವದಲ್ಲಿರು; ಇರು; ಬಾಳು; ಬಾಳಿಕೆ ಬರು; ಉಳಿ; ಉಳಿದಿರು: as long as the fever endures ಜ್ವರ ಇರುವಷ್ಟು ಕಾಲ.