endorse ಇ(ಎ)ನ್‍ಡಾರ್ಸ್‍
ಸಕರ್ಮಕ ಕ್ರಿಯಾಪದ
  1. ಎಂಡಾರ್ಸುಮಾಡು; ಹಿಂದೆ ಬರೆ; ಒಂದು ಪತ್ರದ, ದಸ್ತೈವಜಿನ, ತಮಸೂಕಿನ ಹಿಂಬದಿಯಲ್ಲಿ (ಮುಖ್ಯವಾಗಿ ಹುಂಡಿ, ಚೆಕ್ಕು, ಮೊದಲಾದವುಗಳ ಹಿಂಬದಿಯಲ್ಲಿ ತನ್ನ ಹೆಸರನ್ನು) ಸಹಿ ಮಾಡು.
  2. (ಪತ್ರದ ಹಿಂಭಾಗದಲ್ಲಿ) ವಿವರಣೆ ನಮೂದಿಸು; ಟಿಪ್ಪಣಿ ಬರೆ; ಷರಾ ಬರೆ.
  3. (ಹುಂಡಿ ಮೊದಲಾದ ವುಗಳಲ್ಲಿನ) ತನ್ನ ಹಕ್ಕುಗಳನ್ನು (ಲಿಖಿತದ ಮೂಲಕ ಇನ್ನೊಬ್ಬನಿಗೆ) ವರ್ಗಾಯಿಸು.
  4. (ಹೇಳಿಕೆಯನ್ನು, ಅಭಿಪ್ರಾಯವನ್ನು) ದೃಢಪಡಿಸು; ಒಪ್ಪು; ಸಮ್ಮತಿಸು; ಅನುಮೋದಿಸು.
  5. (ಅಶಿಷ್ಟ) (ಔಷಧಗಳು ಮೊದಲಾದವುಗಳ) ಪ್ರಕಟಣೆಗಳಲ್ಲಿನ ಹೊಗಳಿಕೆಯನ್ನು ಅನುಮೋದಿಸು.
  6. (ತನ್ನ ಒಪ್ಪಿಗೆಯನ್ನು) ತಿಳಿಸು; ಸಾರು; ಸೂಚಿಸು.
  7. (ಬ್ರಿಟಿಷ್‍ ಪ್ರಯೋಗ) (ಮೋಟಾರು ಚಾಲಕನಿಗೆ, ಪಾನಗೃಹದ ಮಾಲೀಕನಿಗೆ, ಕೊಟ್ಟಿರುವ ಪರವಾನಗಿ ಚೀಟಿಯ ಹಿಂದೆ) ಅಪರಾಧ ಯಾ ತಪ್ಪಿತವನ್ನು ಅಧಿಕೃತವಾಗಿ ನಮೂದಿಸು, ಬರೆ.