See also 2endemic
1endemic ಎನ್‍ಡೆಮಿಕ್‍
ಗುಣವಾಚಕ

(ರೋಗ ಮೊದಲಾದವುಗಳ ವಿಷಯದಲ್ಲಿ) ಸ್ಥಳಿಕ; ಸ್ಥಳೀಯ; ಸ್ವದೇಶೋದ್ಭವ; ಒಂದು ನಿರ್ದಿಷ್ಟ ಸಮುದಾಯದಲ್ಲಿ, ಪ್ರದೇಶದಲ್ಲಿ, ದೇಶದಲ್ಲಿ ಕಾಣಿಸುವ; ಒಂದು ಸಮಾಜದಲ್ಲಿ ಯಾ ಸ್ಥಳದಲ್ಲಿ ತಪ್ಪದೆ, ನಿಯತವಾಗಿ, ಏಕರೀತಿಯಾಗಿ ಕಂಡುಬರುವ; ಒಂದು ಪ್ರದೇಶಕ್ಕೆ ಯಾ ಜನರಿಗೆ ವಿಶಿಷ್ಟವಾದ.

See also 1endemic
2endemic ಎನ್‍ಡೆಮಿಕ್‍
ನಾಮವಾಚಕ
  1. ಸ್ಥಳಿಕ — ರೋಗ, ವ್ಯಾಧಿ, ಜಾಡ್ಯ.
  2. ಸ್ಥಳೀಯ ಗಿಡ ಯಾ ಸಸ್ಯ.