See also 2end
1end ಎಂಡ್‍
ನಾಮವಾಚಕ
  1. ಕೊನೆ; ತುದಿ; ಮಿತಿ; ಮೇರೆ; ಎಲ್ಲೆ: there is no end to it ಅದಕ್ಕೆ ಕೊನೆಯಿಲ್ಲ.
  2. ಅಂತ್ಯ; ಅಂತ; ಕಡೆ; ತುದಿ; ಕೊನೆ: end of a line ರೇಖೆಯ (ಸಾಲಿನ) ತುದಿ, ಕೊನೆ.
  3. (ಯಾವುದೇ ವಸ್ತುವಿನ) ಒಂದು ಕಡೆಯ ತುದಿ; ಆ ಕಡೆಯ ಯಾ ಈ ಕಡೆಯ ತುದಿ.
  4. ಉಳಿಕೆ; ತುಂಡು; ಮೋಟು; ಅವಶೇಷ; ಉಳಿದದ್ದು: candle ends ಮೇಣದ ಬತ್ತಿಯ (ಉರಿದು ಮಿಕ್ಕ) ತುಂಡುಗಳು.
  5. (ಕಾಲ, ಕಾರ್ಯ, ಸ್ಥಿತಿ, ಗ್ರಂಥ, ಮೊದಲಾದವುಗಳ) ಕೊನೆ; ಅಂತ್ಯ; ಮುಕ್ತಾಯ; ಸಮಾಪ್ತಿ; ಮುಗಿವು; ಮುಗಿತ.
  6. ಕೊನೆ; ಅಂತ್ಯ; ಕಡೆಗಾಲ; ಕೊನೆಗಾಲ; ಅಂತಿಮ ಸ್ಥಿತಿ: in the end of autumn ಶರದೃತುವಿನ ಕೊನೆಗಾಲದಲ್ಲಿ.
  7. ಕೊನೆ; ಅಂತ್ಯ; ಅಳಿವು; ನಾಶ; ಹಾಳು: the end of civilisation ನಾಗರಿಕತೆಯ ಕೊನೆ, ನಾಶ.
  8. ಮರಣ; ಸಾವು; ಕೊನೆ; ಅಂತ್ಯ.
  9. ಪ್ರಯೋಜನ; ಫಲ; ಉದ್ದೇಶ; ಉಪಯೋಗ; ಫಲಿತಾಂಶ: to what end? ಯಾವ ಪ್ರಯೋಜನಕ್ಕಾಗಿ? to gain his ends ಅವನ ಉದ್ದೇಶಸಾಧನೆಗಾಗಿ.
  10. (ಯಾವುದೇ ಒಂದರ ಅಸ್ತಿತ್ವದ) ಗುರಿ; ಉದ್ದೇಶ; ಅಂತಿಮ, ನಿರ್ಣಾಯಕ ಕಾರಣ: the happiness of the people is the end of government ಜನರ ಸಂತೋಷವೇ ಸರ್ಕಾರದ ಗುರಿ.
  11. (ಅತ್ಯಂತ ದೂರದ) ಬಿಂದು; ತುದಿ; ಕೊನೆ: to the ends of the earth ಭೂಮಿಯ ತುದಿಯವರೆಗೂ.
  12. ಕಡೆ; ಭಾಗ; ತುದಿ; ಕೊನೆ: no problem at my end ನನ್ನ ಕಡೆ ಯಾವ ಸಮಸ್ಯೆಯೂ ಇಲ್ಲ.
  13. ಒಂದು ತಂಡ ಯಾ ಒಬ್ಬ ಆಟಗಾರ ಆಕ್ರಮಿಸಿಕೊಂಡಿರುವ ಕ್ರೀಡಾಂಗಣದ ಯಾ ಆಟದ ಮೈದಾನದ ಅರ್ಧಭಾಗ, ಪಕ್ಕ.
  14. (ಅಮೆರಿಕನ್‍ ಪ್ರಯೋಗ, ಕೆನಡ) ಸಾಲಿನ ಯಾ ತಂಡದ ಕೊನೆಯಲ್ಲಿರುವ ಹುಟ್‍ಬಾಲ್‍ ಆಟಗಾರ.
  15. (ಬೋಲ್ಸ್‍ ಆಟ) ಹುಲ್ಲಿನ ಆಟದ ಮೈದಾನದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಆಡುವ ಆಟದ ಒಂದು ಘಟಕ.
ಪದಗುಚ್ಛ
  1. deep end ಈಜುಕೊಳದಲ್ಲಿ ನೀರು ಆಳವಾಗಿರುವ ತುದಿ ಯಾ ಭಾಗ; ಆಳವಾದ ಕೊನೆ, ಪಕ್ಕ.
  2. end for end ತುದಿಯ ಸ್ಥಾನಗಳನ್ನು ಬದಲಾಯಿಸುವಂತೆ, ಅದಲುಬದಲು ಮಾಡುವಂತೆ; ತಲೆಕೆಳಕಾಗಿ.
  3. end on
    1. (ಕಣ್ಣಿಗೆ) ತುದಿ ಎದುರಾಗಿ; ಯಾವುದಾದರೂ ವಸ್ತುವಿನ ತುದಿಯು ನೋಡುವವರ ಕಣ್ಣಿಗೆ ನೇರವಾಗಿ ತಿರುಗಿ ನಿಂತಿರುವಂತೆ ಯಾ ಅದು ಇನ್ನೊಂದು ವಸ್ತುವಿಗೆ ನೇರವಾಗಿರುವಂತೆ.
    2. ತುದಿತುದಿ ಕೂಡಿ; ಮುಂದಿನ ವಸ್ತುವಿನ ತುದಿಗೆ ಕೂಡಿಕೊಂಡು.
  4. end to end ಉದ್ದಕ್ಕೂ; ಉದ್ದುದ್ದಕ್ಕೆ ನಿರಂತರವಾಗಿ; ತುದಿಯಿಂದ ತುದಿಗೆ: placed end to end ಉದ್ದುದ್ದವಾಗಿ ಕೊನೆ ಕೊನೆ ಕೂಡಿಸಿ ಇಟ್ಟ; ತುದಿತುದಿಗೂಡಿಸಿದ.
  5. rope’s end (ಚಾಟಿಯಿಂದ) ಹೊಡೆಯಲು ಕಸೆಯ ತುದಿಯಲ್ಲಿ ದಾರದಿಂದ ಕಟ್ಟಿದ ಸಣ್ಣ ಗಂಟು.
  6. shoemaker’s end ಮೋಚಿಹುರಿ; ಮೇಣ ಹಾಕಿ ಹುರಿಮಾಡಿದ ಬಿರುಗೂದಲಿನ ಕೊನೆಯುಳ್ಳ ಮೋಚಿಯವನ ದಾರ.
ನುಡಿಗಟ್ಟು
  1. all ends up ಸಂಪೂರ್ಣವಾಗಿ; ಪೂರ್ತಿಯಾಗಿ.
  2. at a loose end ಕೆಲಸವಿಲ್ಲದೆ; ಅನಿಶ್ಚಿತ ಸ್ಥಿತಿಯಲ್ಲಿ: he spent two years wandering about the country at a loose end ಆತ ಏನೂ ಕೆಲಸವಿಲ್ಲದೆ ದೇಶದಲ್ಲಿ ಅಲೆದಾಡುತ್ತ ಎರಡು ವರ್ಷ ಕಳೆದ.
  3. at an end ಮುಗಿದುಹೋಗಿ; ಕೊನೆಯಲ್ಲಿ.
  4. at one’s wits (or wit’s) end ಏನೂ ತೋಚದೆ; ದಿಗ್ಭ್ರಮೆಯಾಗಿ; ಹಿಂದುಮುಂದು ತೋರದೆ; ಕಕ್ಕಾಬಿಕ್ಕಿಯಾಗಿ.
  5. be at an end
    1. ಮುಗಿದುಹೋಗು; ಮುಕ್ತಾಯವಾಗು; ಕೊನೆಗೊಳ್ಳು; ತುದಿಮುಟ್ಟು; ಕೊನೆತಲುಪು; ಪೂರ್ತಿಯಾಗು: the meeting was at an end ಸಭೆ ಮುಕ್ತಾಯವಾಯಿತು.
    2. ಬಳಲಿರು; ಸುಸ್ತಾಗಿರು; ಆಯಾಸಗೊಂಡಿರು.
  6. be at the end of one’s tether ಜಾಣ್ಮೆ, ಸಹನೆ, ಶಕ್ತಿ, ಮೊದಲಾದವುಗಳೆಲ್ಲ ತೀರಿಹೋಗಿ: a succession of illness had brought him to the end of his tether ಕಾಯಿಲೆಗಳ ಪರಂಪರೆಯಿಂದ ಅವನ ಶಕ್ತಿಯೆಲ್ಲವೂ ತೀರಿಯೇಹೋಗಿತ್ತು.
  7. come to a bad end
    1. ನಾಶವಾಗು; ಹಾನಿಗೊಳಗಾಗು.
    2. ಅವಮಾನಕ್ಕೊಳಗಾಗು; ಅಗೌರವಕ್ಕೆ ಗುರಿಯಾಗು; ತನ್ನ ತಪ್ಪುಗಳಿಂದ ಹಾನಿ, ಕಳಂಕ, ಶಿಕ್ಷೆ, ಮೊದಲಾದವುಗಳಿಗೆ ಒಳಗಾಗು.
  8. come to an end = ನುಡಿಗಟ್ಟು \((5)\).
  9. draw to an end ಮುಗಿ; ಕೊನೆ ಮುಟ್ಟು.
  10. end of the road ಕೊನೆಯ ಸ್ಥಾನದಲ್ಲಿ; ಕಟ್ಟಕಡೆಯ ಸ್ಥಳದಲ್ಲಿ; ಬದುಕು ಮೊದಲಾದವು ಸಾಧ್ಯವೇ ಇಲ್ಲದಂಥ ಸ್ಥಾನದಲ್ಲಿ, ಸ್ಥಿತಿಯಲ್ಲಿ.
  11. get hold of the wrong end of the stick (ಅರ್ಥ ಯಾ ಉದ್ದೇಶವನ್ನು) ತಪ್ಪಾಗಿ ಗ್ರಹಿಸು.
  12. go (in) off the deep end
    1. (ಸ್ಕಾಚ್‍ ಈಜುಕಟ್ಟೆಯ ವಿಷಯದಲ್ಲಿ) ಅಪಾಯ ಲಕ್ಷಿಸದೆ ಮುನ್ನುಗ್ಗು; ನಷ್ಟಕ್ಕೆ ಸಿದ್ಧನಾಗಿರು.
    2. (ಆಡುಮಾತು) (ಅನಾವಶ್ಯಕವಾಗಿ) ಕಳವಳಪಡು; ಉದ್ವಿಗ್ನಗಾಗು; ಉದ್ವೇಗಕ್ಕೊಳಗಾಗು; ಗಾಬರಿಯಾಗು; ಮನಃಸ್ಥೈರ್ಯ ಕಳೆದುಕೊ: she goes off the deep end at the mention of his name ಅವನ ಹೆಸರು ಹೇಳಿದರೆ ಸಾಕು, ಅವಳು ಉದ್ವಿಗ್ನಳಾಗುತ್ತಾಳೆ.
    3. (ಆಡುಮಾತು) ಸಿಟ್ಟಾಗು; ಕೋಪಕೊಳ್ಳು.
    4. ವಿಪರೀತಕ್ಕೆ ಹೋಗು; ಮಿತಿಮೀರು: he certainly went off the deep end with that last idea ಅವನ ಕಟ್ಟಕಡೆಯ ಯೋಚನೆ ನೋಡಿದರೆ, ಅವನು ವಿಪರೀತಕ್ಕೆ ಹೋಗಿದ್ದಾನೆ ಅನ್ನಿಸುತ್ತದೆ.
  13. have at one’s finger’s end ಕರಗತ ಮಾಡಿಕೊಂಡಿರು; ಸಿದ್ಧವಾಗಿಟ್ಟುಕೊಂಡಿರು.
  14. in the end ಕೊನೆಗೆ; ಕಟ್ಟಕಡೆಯಲ್ಲಿ; ಆಖೈರಾಗಿ.
  15. keep one’s end up
    1. (ವ್ಯಾಪಾರ ಮೊದಲಾದವುಗಳಲ್ಲಿ) ದಕ್ಷತೆಯಿಂದ ತನ್ನ ಪಾಲಿನ ಕೆಲಸ ನಿರ್ವಹಿಸು.
    2. (ಸಂಭಾಷಣೆ, ಆಟ, ಮೊದಲಾದವುಗಳಲ್ಲಿ) ತನ್ನ ಪಾತ್ರವನ್ನು ಯಶಸ್ವಿಯಾಗಿ ವಹಿಸು.
  16. make an end of ಸಾಕುಮಾಡು; ನಿಲ್ಲಿಸು; ಮುಗಿಸು; ಕೊನೆಗಾಣಿಸು.
  17. make both ends meet ವರಮಾನವನ್ನೂ ವೆಚ್ಚವನ್ನೂ ಸರಿಹೊಂದಿಸು; ತನಗೆ ಬರುವಷ್ಟು ವರಮಾನದಲ್ಲಿ ಕಾಲಹಾಕು; ಆದಾಯ ವೆಚ್ಚ ಸರಿತೂಗುವಂತೆ ಜೀವನ ನಡೆಸು.
  18. make ends meet = ನುಡಿಗಟ್ಟು \((17)\).
  19. no end (ಆಡುಮಾತು) ಬಹಳ; ಅಪಾರ; ಅತ್ಯಂತ; ಬಹಳಷ್ಟು: they were pleased no end by the warm reception ಹಾರ್ದಿಕ ಸ್ವಾಗತದಿಂದ ಅವರಿಗೆ ಬಹಳ ಸಂತೋಷವಾಯಿತು.
  20. no end of (ಆಡುಮಾತು)
    1. ಬಹಳ; ಸಾಕಷ್ಟು.
    2. ಹಲವಾರು; ಅನೇಕ.
  21. odds and ends ಚೂರುಪಾರು; ಚಿಲ್ಲರೆ ಪಲ್ಲರೆ; ಉಳಿಕೆಪಳಿಕೆ; ಎಲ್ಲರೂ ಆರಿಸಿ ಉಳಿದದ್ದು.
  22. on end
    1. ಎಡೆಬಿಡದೆ; ಒಂದೇ ಸಮನಾಗಿ; ಸತತವಾಗಿ; ನಿರಂತರವಾಗಿ: for three weeks on end ಎಡೆಬಿಡದೆ ಮೂರು ವಾರಗಳ ಕಾಲ.
    2. ನೆಟ್ಟಗೆ; ನೇರವಾಗಿ (ಇಡು, ನಿಲ್ಲಿಸು): place the drum on end ಪೀಪಾಯಿಯನ್ನು ನೆಟ್ಟಗೆ ನಿಲ್ಲಿಸು.
  23. put an end to
    1. ನಿಲ್ಲಿಸು; ಮುಗಿಸು; ಕೊನೆಗಾಣಿಸು; ತೊಡೆದುಹಾಕು; ತೆಗೆದುಹಾಕು.
    2. ನಾಶಮಾಡು; ಹಾಳುಮಾಡು.
  24. the end (ಆಡುಮಾತು) (ಸಹನೆ, ತಾಳ್ಮೆಗಳ) ಮಿತಿ; ಕೊಟ್ಟಕೊನೆ.
  25. the end justifies the means ಫಲ ಒಳ್ಳೆಯದಾಗಿದ್ದರೆ ಅದನ್ನು ಪಡೆಯುವ ಮಾರ್ಗ ಯಾ ಸಾಧನ ಕೆಟ್ಟದ್ದಾಗಿದ್ದರೂ ಪರವಾಗಿಲ್ಲ; ಫಲ ಸಾಧನವನ್ನು ಸಮರ್ಥಿಸುತ್ತದೆ.
  26. turn end for end ತಿರುಗಿಸಿಹಾಕು; ತಲೆಕೆಳಗುಮಾಡು; ತುದಿಗಳನ್ನು ಅದಲುಬದಲು ಮಾಡು.
  27. without end ಅನಂತವಾಗಿ; ಮುಗಿಯದೆ; ಕೊನೆಯಿಲ್ಲದೆ; ಕೊನೆಗಾಣದೆ; ಕೊನೆಮುಟ್ಟದೆ; ಸದಾಕಾಲಕ್ಕೂ: we had trouble without end ನಮಗೆ ಕೊನೆಗಾಣದ ಕಷ್ಟ ಒದಗಿತು.
See also 1end
2end ಎಂಡ್‍
ಸಕರ್ಮಕ ಕ್ರಿಯಾಪದ
  1. (ಕಾರ್ಯ, ಭಾಷಣ, ಜೀವ, ಮೊದಲಾದವನ್ನು) ಮುಗಿಸು; ಮುಕ್ತಾಯಮಾಡು; ಕೊನೆಗೊಳಿಸು.
  2. ಮುಗಿಸಿಬಿಡು; ತೀರಿಸಿಬಿಡು; ನಾಶಮಾಡು; ಕೊನೆಗಾಣಿಸು; ಕೊಲ್ಲು; ಸಾಯಿಸು: a bullet through the heart ended him ಅವನ ಹೃದಯದಲ್ಲಿ ಹೊಕ್ಕ ಗುಂಡು ಅವನನ್ನು ಮುಗಿಸಿತು.
  3. ಪೂರಯಿಸು; ಮುಗಿಸು; ಮುಕ್ತಾಯಗೊಳಿಸು: he ended his drudging labour ಬೇಸರ ತರುವ ತನ್ನ ದುಡಿಮೆಯನ್ನು ಅವನು ಮುಕ್ತಾಯಗೊಳಿಸಿದ.
ಅಕರ್ಮಕ ಕ್ರಿಯಾಪದ
  1. ಕೊನೆಗಾಣು; ಮುಗಿ; ತೀರಿಹೋಗು.
  2. ಪರ್ಯವಸಾನವಾಗು; ಸಮಾಪ್ತವಾಗು; ಪರಿಣಾಮಗೊಳ್ಳು: extravagance ends in want ದುಂದುಗಾರಿಕೆ ಅಭಾವದಲ್ಲಿ ಪರ್ಯವಸಾನಗೊಳ್ಳುತ್ತದೆ.
ನುಡಿಗಟ್ಟು
  1. end by doing ಕೊನೆಗೆ ಮಾಡಿಬಿಡು; ಅಂತಿಮವಾಗಿ ಮಾಡಿಬಿಡು: will end by marrying a duke ಕೊನೆಗೆ ಒಬ್ಬ ಡ್ಯೂಕನನ್ನು ಮದುವೆಯಾಗಿಬಿಡುತ್ತಾಳೆ.
  2. end in ಫಲವಾಗು; ಪರಿಣಾಮವಾಗು: the scheme ended in failure ಯೋಜನೆ ನಿಷ್ಫಲವಾಯಿತು.
  3. end it (all) (ಆಡುಮಾತು) ಆತ್ಮಹತ್ಯೆ ಮಾಡಿಕೊ; ತನ್ನನ್ನೇ ಕೊನೆಗೊಳಿಸು; ಜೀವ ತೆಗೆದುಕೊ.
  4. end off ಮುಗಿಸು; ಮುಕ್ತಾಯಗೊಳಿಸು: he ended off his speech wth some jokes ಅವನು ಕೆಲವು ಹಾಸ್ಯ ಚಟಾಕಿಗಳಿಂದ ತನ್ನ ಭಾಷಣ ಮುಗಿಸಿದ.
  5. end up ಕೊನೆಯಾಗು; ಮುಗಿ; ಮುಕ್ತಾಯವಾಗು; ಗುರಿ ತಲುಪು: he ended up in the jail ಕೊನೆಗೆ ಅವನು ಜೈಲುಸೇರಿದ.