encumber ಇ(ಎ)ನ್‍ಕಂಬರ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ಚಲನೆ, ಕಾರ್ಯಗಳನ್ನು ಹೊರೆ, ಕಷ್ಟ, ಮೊದಲಾದವುಗಳಿಂದ) ಪ್ರತಿಬಂಧಿಸು; ಅಡಚಣೆಮಾಡು; ಅಡ್ಡಿಪಡಿಸು; ಆತಂಕಪಡಿಸು.
  2. (ವ್ಯಕ್ತಿಯ, ಆಸ್ತಿಯ ಮೇಲೆ ಸಾಲದ, ಮುಖ್ಯವಾಗಿ ಭೋಗ್ಯಗಳ) ಭಾರಹೊರಿಸು; ಹೊರೆ ಹೇರು.
  3. (ಒಂದು ಸ್ಥಳವನ್ನು ಬೇಡದ ಸಾಮಾನು ಮೊದಲಾದವುಗಳಿಂದ) ತುಂಬು; ಗಿಡಿ; ಅಡಚು; ತುರುಕು (ರೂಪಕವಾಗಿ ಸಹ): a mind encumbered with unnecessary information ಬೇಡವಾದ ವಿಷಯಗಳನ್ನು ತುಂಬಿಟ್ಟುಕೊಂಡ ಮನಸ್ಸು.