enclosure ಇನ್‍ಕ್ಲೋಷರ್‍
ನಾಮವಾಚಕ
  1. (ಮುಖ್ಯವಾಗಿ ಊರೊಟ್ಟಿನ ನೆಲವನ್ನು ಖಾಸಗಿ ಆಸ್ತಿಯನ್ನಾಗಿ ಮಾಡಿಕೊಳ್ಳಲು) ಹದ್ದುಬಸ್ತು ಮಾಡಿಕೊಳ್ಳುವುದು; ಗೋಡೆ, ಪ್ರಾಕಾರ, ಬೇಲಿ, ಮೊದಲಾದವನ್ನು ಹಾಕಿಕೊಳ್ಳುವುದು.
  2. ಸುತ್ತುಗಟ್ಟಿದ ಬೇಲಿ, ಗೋಡೆ, ಮುಚ್ಚುಗೆ, ಮೊದಲಾದವು.
  3. (ಕ್ರೀಡೆ ಮೊದಲಾದ ಸಂದರ್ಭಗಳಲ್ಲಿ, ವಿಶೇಷ ತರಗತಿಯ ಜನರಿಗಾಗಿ ಮೀಸಲಾದ) ಸುತ್ತುಗಟ್ಟುಳ್ಳ ಪ್ರದೇಶ; ಆವರಣ.
  4. ಅಡಕ; ಸೇರಿಕೆ; ಮಲಹೂಪಿ; ಪತ್ರದ ಜೊತೆಯಲ್ಲಿ ಲಕೋಟೆಯಲ್ಲಿಡುವ ಇತರ ಕಾಗದ ಮೊದಲಾದವು.