enclose ಇನ್‍ಕ್ಲೋಸ್‍
ಸಕರ್ಮಕ ಕ್ರಿಯಾಪದ
  1. (ಜಮೀನು ಮೊದಲಾದವನ್ನು ಗೋಡೆ, ಬೇಲಿ, ಮೊದಲಾದವುಗಳಿಂದ) ಸುತ್ತುಗಟ್ಟು; ಸುತ್ತುವರಿ; ಆವರಿಸು; ಆವರಣ ಹಾಕು.
  2. ಕೋಶದಲ್ಲಿ ಮುಚ್ಚಿಡು; ಪೆಟ್ಟಿಗೆಯಲ್ಲಿ ಹಾಕು; ಭರಣಿಯಲ್ಲಿ ಇಡು.
  3. (ಮುಖ್ಯವಾಗಿ ಪತ್ರದೊಡನೆ ಲಕೋಟೆಯಲ್ಲಿ) ಬೇರೆ ಏನನ್ನಾದರೂ ಇಡು, ಒಳಕ್ಕೆ ಸೇರಿಸು.
  4. (ಗಣಿತ) ಆವರಿಸು; ಸುತ್ತುವರಿ; ಒಳಗೊಂಡಿರು: a figure enclosed by four straight lines is a quadrilateral ನಾಲ್ಕು ಸರಳ ರೇಖೆಗಳಿಂದ ಆವೃತವಾದ ಆಕೃತಿಗೆ ಚತುರ್ಭುಜವೆಂದು ಹೆಸರು.
  5. (ಎಲ್ಲ ಕಡೆಗಳಲ್ಲೂ) ಮುತ್ತು; ಸುತ್ತುಗಟ್ಟು; ಸುತ್ತುವರಿ; ಆವರಿಸು: a valley enclosed by tall mountains ಎತ್ತರವಾದ ಪರ್ವತಗಳಿಂದ ದಟ್ಟವಾಗಿ ಆವರಿಸಿದ.
  6. (ಒಂದು ಧಾರ್ಮಿಕ ಪಂಥವನ್ನು ಹೊರಗಿನ ಪ್ರಪಂಚದಿಂದ) ಬೇರ್ಪಡಿಸು; ಪ್ರತ್ಯೇಕಗೊಳಿಸು; ಪೃಥಕ್ಕರಿಸು.