encaenia ಎನ್‍ಸೀನಿಅ
ನಾಮವಾಚಕ
  1. ಸಮರ್ಪಣ ಮಹೋತ್ಸವ; ಚರ್ಚು ಯಾ ದೇವಾಲಯದಲ್ಲಿ (ಮುಖ್ಯವಾಗಿ ಜೆರೂಸಲಮ್‍ನಲ್ಲಿರುವ ಯೆಹೂದ್ಯರ ದೇವಾಲಯದಲ್ಲಿ) ನಡೆಯುವ ವಾರ್ಷಿಕ ಅರ್ಪಣ ಮಹೋತ್ಸವ.
  2. ನಗರ ಮೊದಲಾದವು ಸ್ಥಾಪನೆಯಾದ ದಿನದ ವಾರ್ಷಿಕ ಮಹೋತ್ಸವ; ಸ್ಥಾಪನೆ ದಿನಾಚರಣೆ.
  3. (ಬ್ರಿಟಿಷ್‍ ಪ್ರಯೋಗ) (ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದಲ್ಲಿ) ಸ್ಮಾರಕೋತ್ಸವ; ಸ್ಥಾಪಕರ ಮತ್ತು ಪೋಷಕರ ನೆನಪಿಗಾಗಿ ಪ್ರತಿವರ್ಷವೂ ಜೂನ್‍ನಲ್ಲಿ ನಡೆಸುವ ಉತ್ಸವ.