See also 2enamel
1enamel ಇನ್ಯಾಮಲ್‍
ನಾಮವಾಚಕ
  1. ಇನ್ಯಾಮಲ್ಲು; ಪಿಂಗಾಣಿ ಮುಲಾಮು; ಗಾಜುಲೇಪ; ಒಂದು ಲೋಹದ ಯಾ ಇತರ ಗಡಸು ವಸ್ತುಗಳ ಮೈ ಮೇಲೆ ಅಂದಕ್ಕಾಗಿ ಯಾ ರಕ್ಷಕ ಹೊದಿಕೆಯಾಗಿ ಲೇಪಿಸುವ, ಅಪಾರಕವೋ ಅರೆಪಾರಕವೋ ಆದ ಗಾಜಿನಂಥ ಲೇಪ.
  2. ಇನ್ಯಾಮಲ್‍ (ಲೇಪಿಸಿದ) ವಸ್ತುಗಳು, ಪದಾರ್ಥಗಳು.
  3. (ರೂಪಕವಾಗಿ) (ಮುಖ್ಯವಾಗಿ ಇನ್ಯಾಮಲ್‍ ಹಾಗೆ) ಕಠಿಣವಾಗಿದ್ದೂ ನಯವಾಗಿ ಕಾಣುವಂಥದು.
  4. ನಯವಾಗಿಯೂ ಗಡುಸಾಗಿಯೂ ಇರುವ ಯಾವುದೇ ಲೇಪ.
  5. ಮುಖರಾಗ; ಮುಖಕ್ಕೆ ಬಣ್ಣಗೊಡಲು ಹಚ್ಚುವ ಹಲವು ಬಗೆಯ ಮೆರಗು.
  6. ಇನ್ಯಾಮಲ್ಲು; ಹಲ್ಲಿನ ಮೇಲಿನ ಗಡುಸಾದ, ನಯವಾದ ಮತ್ತು ಹೊಳೆಯುವ ಪದರ.
  7. (ಇನ್ಯಾಮಲ್‍ನಿಂದ ಬರೆದ) ವರ್ಣಚಿತ್ರ.
  8. (ಕಾವ್ಯಪ್ರಯೋಗ) ನುಣುಪಾದ ಮತ್ತು ಪ್ರಕಾಶವಾದ ಹೊರಬಣ್ಣ, ಹಸುರುಪಯಿರು, ಮೊದಲಾದವು.
See also 1enamel
2enamel ಇನ್ಯಾಮಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ enamelling ಭೂತರೂಪ ಮತ್ತು ಭೂತಕೃದಂತ enamelled).
  1. (ಲೋಹ ಮೊದಲಾದವಕ್ಕೆ) ಇನ್ಯಾಮಲ್‍ ಬಳಿ; ಪಿಂಗಾಣಿ ಮುಲಾಮು ಬಳಿ; ಗಾಜುಲೇಪ ಕೊಡು.
  2. (ಮುಖಕ್ಕೆ ಯಾ ಚರ್ಮಕ್ಕೆ) ಮೆರಗು ಕೊಡು.
  3. (ಆಕೃತಿ ಮೊದಲಾದವನ್ನು) ಇನ್ಯಾಮಲಿನಿಂದ ಚಿತ್ರಿಸು.
  4. (ಪ್ರಾಚೀನ ಪ್ರಯೋಗ) ಬಗೆಬಗೆಯ ಬಣ್ಣಗಳಿಂದ ಸಿಂಗರಿಸು.