enable ಇ(ಎ)ನೇಬ್‍ಲ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು ನಿರ್ದಿಷ್ಟ ಕೆಲಸ ಮಾಡಲು) ಅಧಿಕೃತನನ್ನಾಗಿ ಮಾಡು; (ಒಬ್ಬನಿಗೆ ನಿರ್ದಿಷ್ಟ ಕೆಲಸ ಮಾಡಲು) ಅಧಿಕಾರ ಕೊಡು; ಶಕ್ತಿ ಒದಗಿಸು; ಸಮರ್ಥನನ್ನಾಗಿಸು.
  2. (ವ್ಯಕ್ತಿ ಮೊದಲಾದವರಿಗೆ ನಿರ್ದಿಷ್ಟ ಕೆಲಸ ಮಾಡಲು) ಸಾಧನ ಒದಗಿಸು; ಅನುಕೂಲ ಒದಗಿಸು.
  3. ಸಾಧ್ಯಗೊಳಿಸು; ಸಾಧ್ಯವಾಗಿಸು: aeronautics enables us to overcome great distances ಬಹುದೂರಗಳನ್ನು ಕ್ರಮಿಸಲು ವಾಯುಯಾನ ನಮಗೆ ಸಾಧ್ಯವಾಗಿಸುತ್ತದೆ.
ಪದಗುಚ್ಛ

enabling act

  1. (ಬ್ರಿಟಿಷ್‍ ಪ್ರಯೋಗ) (Enabling Act) ಮುಖ್ಯವಾಗಿ ಇಂಗ್ಲಂಡಿನ ಎಸ್ಟ್ಯಾಬ್ಲಿಷ್ಡ್‍ ಚರ್ಚಿಗೆ, ಬ್ರಿಟಿಷ್‍ ಪಾರ್ಲಿಮೆಂಟಿನ ವೀಟೋ ಅಧಿಕಾರಕ್ಕೊಳಪಟ್ಟಂತೆ, ಸ್ವಲ್ಪಮಟ್ಟಿಗೆ ಸ್ವಾಡಳಿತ ಕೊಟ್ಟ, 1920ರ ಕಾಯಿದೆ.
  2. (ನಿರ್ದಿಷ್ಟ ಕೆಲಸವನ್ನು ವಹಿಸಿಕೊಳ್ಳಲು ವ್ಯಕ್ತಿಗೆ ಯಾ ಸಂಸ್ಥೆಗೆ) ಅಧಿಕಾರ ಕೊಡುವ ಕಾಯಿದೆ.
  3. (ಅಮೆರಿಕನ್‍ ಪ್ರಯೋಗ) (ಶಾಸನಕ್ಕೊಳಪಡದ ಯಾವುದೇ ವಿಷಯವನ್ನು) ಕಾನೂನುಬದ್ಧಗೊಳಿಸುವ ಕಾಯಿದೆ.