See also 2en-
1en- ಎನ್‍-, ಇನ್‍-
ಪೂರ್ವಪ್ರತ್ಯಯ

(= $^1$in-) ಕ್ರಿಯಾಪದಗಳನ್ನು ರಚಿಸಲು ಬಳಸುವ ಪೂರ್ವಪ್ರತ್ಯಯ:

  1. ‘ಒಂದು ವಸ್ತುವನ್ನು ಇನ್ನೊಂದರ ಒಳಗೆ ಯಾ ಒಳಕ್ಕೆ’ ಎಂಬ ಅರ್ಥದಲ್ಲಿ ನಾಮವಾಚಕಗಳಿಂದ ಕ್ರಿಯಾಪದಗಳನ್ನು ರಚಿಸುವ ಪೂರ್ವಪ್ರತ್ಯಯ: embed, engulf.
  2. ‘ಒಂದು ವಸ್ತುವನ್ೋ ವಿಷಯವನ್ನೋ ಒಂದರ ಯಾ ಒಬ್ಬನ ವಶಕ್ಕೆ’ ಎಂಬರ್ಥದಲ್ಲಿ ನಾಮವಾಚಕಗಳಿಂದ ಕ್ರಿಯಾಪದಗಳನ್ನು ರಚಿಸುವ ಪೂರ್ವಪ್ರತ್ಯಯ: entrust.
  3. ನಾಮವಾಚಕಗಳಿಂದಲೋ ಗುಣವಾಚಕಗಳಿಂದಲೋ ‘ಒಂದು ಸ್ಥಿತಿಗೆ ತರು’ ಎಂಬ ಅರ್ಥದ ಕ್ರಿಯಾಪದಗಳನ್ನು ರಚಿಸುವ ಪೂರ್ವಪ್ರತ್ಯಯ: enable, enslave, ಹಲವು ವೇಳೆ -en ಉತ್ತರಪ್ರತ್ಯಯದೊಡನೆ, ಉದಾಹರಣೆಗೆ embolden, enlighten.
  4. ಕ್ರಿಯಾಪದಗಳಿಂದ ‘ಒಳಕ್ಕೆ’ ಯಾ ಮೇಲೆ’ ಎಂಬರ್ಥದ ಕ್ರಿಯಾಪದಗಳನ್ನು ರಚಿಸುವಾಗ ಬಳಸುವ ಪೂರ್ವಪ್ರತ್ಯಯ: enfold.
  5. ಕ್ರಿಯಾಪದಗಳಲ್ಲಿ ಉತ್ಕರ್ಷಕಾರ್ಥ ಸೂಚಿಸಲು ಬಳಸುವ ಪೂರ್ವಪ್ರತ್ಯಯ encarnalize.
See also 1en-
2en- ಎನ್‍-, ಇನ್‍-
ಪೂರ್ವಪ್ರತ್ಯಯ

‘ಒಳಗೆ’ ಎಂಬ ಅರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ ಆದರೆ. b, m, p, ph ಗಳ ಹಿಂದೆ em- ಆಗಿಯೂ, l, r ಹಿಂದೆ el- ಮತ್ತು er- ಆಗಿಯೂ ಬದಲಾಯಿಸುತ್ತದೆ, ಉಳಿದೆಡೆಯಲ್ಲಿ en- ಆಗಿಯೇ ಉಳಿಯುತ್ತದೆ.