See also 2empty  3empty
1empty ಎಂಪ್ಟಿ
ಗುಣವಾಚಕ
  1. ಬರಿದಾದ; ಬರಿಯ; ಪೊಳ್ಳು; ಖಾಲಿ; ಶೂನ್ಯ; ರಿಕ್ತ; ಟೊಳ್ಳು; ಒಳಗೇನೂ ಇಲ್ಲದ.
  2. ಗುಣಗಳಿಲ್ಲದ; ಗುಣರಹಿತ; ನಿರ್ಗುಣ.
  3. (ಆಡುಮಾತು) ಹಸಿದ; ಬರಿ ಹೊಟ್ಟೆಯ; ಕ್ಷುಧಾರ್ತ.
  4. (ಮನೆಯ ವಿಷಯದಲ್ಲಿ) ಖಾಲಿ; ಸಜ್ಜುಸರಂಜಾಮಾಗಲಿ ನಿವಾಸಿಗಳಾಗಲಿ ಇಲ್ಲದ.
  5. (ಸಾಗುಬಂಡಿ, ವ್ಯಾನು, ಹಡಗು , ಮೊದಲಾದವುಗಳ ವಿಷಯದಲ್ಲಿ) ಹೇರು ಇಲ್ಲದ; ಭಾರ ಹೇರದ; ಖಾಲಿ ಇರುವ.
  6. (ವ್ಯಕ್ತಿಗಳು, ಯೋಜನೆಗಳು, ಮೊದಲಾದವುಗಳ ವಿಷಯದಲ್ಲಿ) ಬುದ್ಧಿಯಿಲ್ಲದ; ದಡ್ಡ; ವಿವೇಕವಿಲ್ಲದ; ಅವಿವೇಕದ: empty head ಖಾಲಿ ತಲೆ; ದಡ್ಡ.
  7. ಅರ್ಥವಿಲ್ಲದ; ಅರ್ಥಹೀನ; ಅರ್ಥಶೂನ್ಯ; ಅರ್ಥರಹಿತ: empty words ಅರ್ಥಶೂನ್ಯವಾದ ಪದಗಳು.
  8. ಅತೃಪ್ತಿಕರವಾದ; ಸಮಾಧಾನ ನೀಡದ: feeling empty ಅತೃಪ್ತ ಭಾವನೆಯಿಂದ.
  9. ವ್ಯರ್ಥ; ಪೊಳ್ಳು; ಪರಿಣಾಮಕಾರಿಯಲ್ಲದ: empty threats ಪೊಳ್ಳು ಬೆದರಿಕೆಗಳು; ಖಾಲಿ ಬೆದರಿಕೆಗಳು.
See also 1empty  3empty
2empty ಎಂಪ್ಟಿ
ನಾಮವಾಚಕ

ಖಾಲಿಯಾದ ಸರಕುಬಂಡಿ, ಪೆಟ್ಟಿಗೆ, ಸೀಸೆ, ಮೊದಲಾದವು.

See also 1empty  2empty
3empty ಎಂಪ್ಟಿ
ಸಕರ್ಮಕ ಕ್ರಿಯಾಪದ
  1. (ಪಾತ್ರೆ ಮೊದಲಾದವುಗಳನ್ನು) ಬರಿದುಮಾಡು; ತೆರಪುಮಾಡು; ಖಾಲಿಮಾಡು; (ಪಾತ್ರೆ ಮೊದಲಾದವುಗಳ) ಒಳಗಿರುವುದನ್ನು ತೆಗೆದುಹಾಕು.
  2. (ಒಂದರಲ್ಲಿರುವುದನ್ನು ಇನ್ನೊಂದರಲ್ಲಿ ಯಾ ಇನ್ನೊಂದಕ್ಕೆ ಯಾ ಇನ್ನೊಂದರ ಮೇಲೆ) ಸುರಿ.
ಅಕರ್ಮಕ ಕ್ರಿಯಾಪದ
  1. ಬರಿದಾಗು; ಖಾಲಿಯಾಗು; ಶೂನ್ಯವಾಗು.
  2. (ನದಿಯ ವಿಷಯದಲ್ಲಿ) (ಸಮುದ್ರ ಮೊದಲಾದವುಗಳಲ್ಲಿ) ಸುರಿದುಕೊ; ಬರಿದು ಮಾಡಿಕೊ.