empoison ಇಂಪಾಯ್‍ಸ್‍ನ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಯಾ ಸಾಹಿತ್ಯ) ವಿಷ ಹಾಕು; ವಿಷ ಬೆರಸು; ವಿಷ ಹಿಂಡು; ವಿಷ ಸುರಿ; ನಂಜಿಕ್ಕು.
  2. (ವಿಷ ಹಾಕಿದಂತೆ) ಕೆಡಿಸು; ಕಲುಷಿತ ಮಾಡು; ಕೆಡಿಸಿ ವಿಷವಾಗಿಸು.
  3. (ರೂಪಕವಾಗಿ) ದೂಷಿತಗೊಳಿಸು; ನಡತೆಗೆಡಿಸು; ಭ್ರಷ್ಟಗೊಳಿಸು
  4. (ಒಬ್ಬನ ಮನಸ್ಸನ್ನು) ಕೆಡಿಸು; (ಮನಸ್ಸಿಗೆ) ಹುಳಿಹಿಂಡು; ದ್ವೇಷ ಹುಟ್ಟಿಸು; ವಿರೋಧ ಹುಟ್ಟಿಸು; ವೈಷಮ್ಯ ಉಂಟುಮಾಡು.