employment ಇಂ(ಎಂ)ಪ್ಲಾಯ್‍ಮಂಟ್‍
ನಾಮವಾಚಕ
  1. (ವಸ್ತುವನ್ನು, ಒಬ್ಬನ ಶಕ್ತಿ, ಮೊದಲಾದವುಗಳನ್ನು ಯಾವುದೇ ಗುರಿ ಸಾಧಿಸಲು) ಬಳಸುವುದು; ಉಪಯೋಗಿಸುವುದು; ಪ್ರಯೋಗಿಸುವುದು.
  2. (ಒಬ್ಬನ ಸೇವೆಯನ್ನು) ಉಪಯೋಗಿಸುವುದು; ಬಳಸುವುದು.
  3. (ಒಬ್ಬನನ್ನು) (ತನ್ನ ಸೇವೆಯಲ್ಲಿ) ಇಟ್ಟುಕೊಳ್ಳುವುದು.
  4. (ತನ್ನನ್ನು ಯಾ ಇತರರನ್ನು) ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಯಾ ತೊಡಗಿಸುವುದು.
  5. (ತನ್ನನ್ನು ಯಾ ಇತರರನ್ನು) ತೊಡಗಿಸಿಕೊಂಡಿರುವ ಕೆಲಸ ಯಾ ಚಟುವಟಿಕೆ.
  6. (ಮುಖ್ಯವಾಗಿ ಒಬ್ಬನ) (ಜೀವನೋಪಾಯದ) ವೃತ್ತಿ; ಉದ್ಯೋಗ; ಕೆಲಸ; ಸೇವೆ; ನೌಕರಿ; ಚಾಕರಿ; ಕಸುಬು.
  7. ಕೆಲಸದಲ್ಲಿರುವ ಯಾ ನೌಕರಿಯಲ್ಲಿರುವ ಸ್ಥಿತಿ.
ಪದಗುಚ್ಛ

full employment ಪೂರ್ತಿ ಕೆಲಸ; ಪೂರ್ಣೋದ್ಯೋಗ; ಬಂಡವಾಳವಾಗಲೀ, ಕೆಲಸಗಾರರಾಗಲೀ ನಿಷ್ಕ್ರಿಯವಾಗಿಲ್ಲದಿರುವ ಸ್ಥಿತಿ; ಹೂಡಿರುವ ಬಂಡವಾಳವನ್ನು ಪೂರ್ತಿ ತೊಡಗಿಸಿದ್ದು, ಕೆಲಸಗಾರರು ತಾವು ಮಾಡಬೇಕಾಗಿರುವ ಕೆಲಸವನ್ನು ಪೂರ್ತಿಯಾಗಿ ಮಾಡುತ್ತಿರುವ ಸ್ಥಿತಿ.