See also 2employ
1employ ಇಂ(ಎಂ)ಪ್ಲಾಯ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ಯಾ ತನ್ನ ಶಕ್ತಿ, ಕಾಲ, ಮೊದಲಾದವನ್ನು ಒಂದು ಗುರಿ ಸಾಧಿಸಲು) ಬಳಸು; ಉಪಯೋಗಿಸು; ಪ್ರಯೋಗಿಸು.
  2. (ಒಬ್ಬನ ಸೇವೆಗಳನ್ನು) ಬಳಸಿಕೊ; ಉಪಯೋಗಿಸಿಕೊ.
  3. (ಒಬ್ಬನನ್ನು) ತನ್ನ ಸೇವೆಯಲ್ಲಿ ಇಟ್ಟುಕೊ; ನೇಮಿಸಿಕೊ.
  4. (ತನ್ನನ್ನು ಯಾ ಇತರರನ್ನು ಕೆಲಸದಲ್ಲಿ ತೊಡಗಿಸಿಕೊ; ತೊಡಗಿಸು; ಉದ್ಯುಕ್ತಗೊಳಿಸಿಕೊ; ಉದ್ಯುಕ್ತಗೊಳಿಸು.)
See also 1employ
2employ ಇಂ(ಎಂ)ಪ್ಲಾಯ್‍
ನಾಮವಾಚಕ
  1. ಉದ್ೋಗ; ಸೇವೆ; ಊಳಿಗ; ಚಾಕರಿ; ನೌಕರಿ.
  2. (ಸಂಬಳದ ಮೇಲೆ) ಉದ್ಯೋಗದಲ್ಲಿರುವುದು.
ಪದಗುಚ್ಛ

in the employ of -ರ ಕೆಲಸದಲ್ಲಿ, ಸೇವೆಯಲ್ಲಿ, ನೌಕರಿಯಲ್ಲಿ; ವ್ಯಕ್ತಿಯಿಂದ, ಸಂಸ್ಥೆಯಿಂದ ನೇಮಕಗೊಂಡಿರುವ.