See also 2empiric
1empiric ಎಂ(ಇಂ)ಪಿರಿಕ್‍
ಗುಣವಾಚಕ
  1. ಅನುಭವಾತ್ಮಕ; ಅನುಭವಜನ್ಯ; ಅನುಭವಜನಿತ; ಪ್ರಯೋಗಸಿದ್ಧ; ಪ್ರಾಯೋಗಿಕ; ಯಾವುದೇ ಸಿದ್ಧಾಂತದ ಆಧಾರವನ್ನವಲಂಬಿಸದೆ ವೀಕ್ಷಣೆ ಹಾಗೂ ಪ್ರಯೋಗಗಳನ್ನೇ ಅವಲಂಬಿಸಿರುವ ಯಾ ಅವಲಂಬಿಸಿ ಮಾಡುವ.
  2. ಕೇವಲ ಅನುಭವ ಯಾ ಪ್ರಯೋಗದಿಂದ ಜ್ಞಾನ ಪಡೆಯುವ.
  3. ಶಾಸ್ತ್ರಜ್ಞಾನವಿಲ್ಲದ; ಕಪಟಪಾಂಡಿತ್ಯದ.
  4. ಇಂದ್ರಿಯ ಮೂಲಕದ ಯಾ ಇಂದ್ರಿಯಜನ್ಯವಾದ ಜ್ಞಾನ ಮಾತ್ರವೇ ಯಥಾರ್ಥವಾದ ಯಾ ಪ್ರಮಾಣಭೂತವಾದ ಮಾಹಿತಿಯೆಂದು ಪರಿಗಣಿಸುವ.
See also 1empiric
2empiric ಎಂ(ಇಂ)ಪಿರಿಕ್‍
ನಾಮವಾಚಕ
  1. ಪ್ರಯೋಗವಾದಿ; ಕೇವಲ ವೀಕ್ಷಣ ಮತ್ತು ಪ್ರಯೋಗಗಳನ್ನೇ ಅವಲಂಬಿಸಿರುವವನು.
  2. (ಪ್ರಾಚೀನ ಪ್ರಯೋಗ) ಕಪಟವೈದ್ಯ; ಅಳಲೆಕಾಯಿಪಂಡಿತ.