empire ಎಂಪೈಅರ್‍
ನಾಮವಾಚಕ
  1. (ಸಾರ್ವಭೌಮತ್ವವುಳ್ಳ, ವಿಸ್ತಾರವಾದ) ಸಾಮ್ರಾಜ್ಯ; ಚಕ್ರಾಧಿಪತ್ಯ.
  2. (ಪ್ರಾಚೀನ ಪ್ರಯೋಗ) ಸರ್ವಾಧಿಕಾರ; ನಿರಂಕುಶಾಧಿಕಾರ.
  3. ಚಕ್ರಾಧಿಪತ್ಯ; ಚರ್ಕವರ್ತಿಯನ್ನೇ ಸರ್ವೋನ್ನತ ಅಧಿಕಾರಿಯಾಗಿ ಉಳ್ಳ ಸರ್ಕಾರ.
  4. ಸಾಮ್ರಾಜ್ಯ; ಚಕ್ರವರ್ತಿಗೆ ಅಧೀನವಾಗಿರುವ ಭೂಭಾಗ.
  5. ಚಕ್ರಾಧಿಪತ್ಯಾವಧಿ; ಚಕ್ರವರ್ತಿಯನ್ನೇ ಸರ್ವೋನ್ನತ ಅಧಿಕಾರಿಯಾಗುಳ್ಳ ಸರ್ಕಾರದ ಕಾಲ.
  6. ಸಾರ್ವಭೌಮತ್ವ; ಚಕ್ರಾಧಿಪತಿತ್ವ.
  7. ಸಾಮ್ರಾಜ್ಯ; ಒಬ್ಬ ವ್ಯಕ್ತಿಯ ಯಾ ಒಂದು ಗುಂಪಿನ ನಿರ್ದೇಶನದಲ್ಲಿ ಯಾ ಒಡೆತನದಲ್ಲಿ ನಡೆಯುವ ದೊಡ್ಡ ವಾಣಿಜ್ಯ ಸಂಸ್ಥೆ, ಉದ್ಯಮ, ಮೊದಲಾದವು: an oil empire ತೈಲಸಾಮ್ರಾಜ್ಯ; ಭಾರಿ ತೈಲೋದ್ಯಮ.
  8. (Empire) (ವಿಶೇಷಣವಾಗಿ)
    1. ಮೊದಲನೇ ಹ್ರೆಂಚ್‍ ಸಾಮ್ರಾಜ್ಯದ (1804–14) ಯಾ ಎರಡನೇ ಹ್ರೆಂಚ್‍ ಸಾಮ್ರಾಜ್ಯದ (1852–70) ಕಾಲದಲ್ಲಿ ಷೋಕಿ ಆಗಿದ್ದ, ಮನೆಯ ಸಜ್ಜಿನ ಯಾ ಪೀಠೋಪಕರಣಗಳ ಯಾ ಉಡಿಗೆತೊಡಿಗೆಯ ಶೈಲಿ.
    2. (ಬ್ರಿಟಿಷ್‍ ಪ್ರಯೋಗ) ಕಾಮನ್‍ವೆಲ್ತ್‍ ದೇಶಗಳಿಂದ ಬರುವ ವೈನ್‍ ಮೊದಲಾದವು.
ಪದಗುಚ್ಛ

the Empire (ಚರಿತ್ರೆ) (ಸಾಮಾನ್ಯವಾಗಿ) ಪವಿತ್ರ ರೋಮನ್‍ ಸಾಮ್ರಾಜ್ಯ ಯಾ ಬ್ರಿಟಿಷ್‍ ಸಾಮ್ರಾಜ್ಯ.