empathy ಎಂಪತಿ
ನಾಮವಾಚಕ

(ಮನಶ್ಶಾಸ್ತ್ರ)

  1. ತಾದಾತ್ಮ್ಯಾನುಭೂತಿ; ಪರಾನುಭೂತಿ ಶಕ್ತಿ:
    1. ಚಿಂತಕನ ಮನಸ್ಸನ್ನು ಚಿಂತ್ಯ ವಸ್ತುವಿನೊಳಕ್ಕೆ ಹರಿಸಿ, ಅದನ್ನು ವ್ಯಾಪಿಸಿ, ತನ್ಮೂಲಕ ಅದನ್ನು ಪೂರ್ಣವಾಗಿ ಗ್ರಹಿಸುವ ಶಕ್ತಿ.
    2. ಬೇರೊಬ್ಬರ ಭಾವಗಳು, ಸಂಕಲ್ಪಗಳು ಯಾ ಭಾವನೆಗಳನ್ನು, ಕೆಲವೊಮ್ಮೆ ಬೇರೊಬ್ಬರ ಚಲನವಲನಗಳನ್ನು, ಆ ವ್ಯಕ್ತಿಯ ದೈಹಿಕ ಚಲನವಲನಗಳನ್ನು ಅನುಕರಿಸುವ ಮಟ್ಟಿಗೆ ತನ್ನಲ್ಲೇ ಆರೋಪಿಸಿಕೊಂಡು ಅದನ್ನು ತನ್ನದಾಗಿ ಅನುಭವಿಸುವ ಶಕ್ತಿ.
  2. ಸ್ವಾತ್ಮಾರೋಪ; ತನ್ನ ದೃಷ್ಟಿ, ಭಾವ, ಮನೋದೃಷ್ಟಿಗಳನ್ನು ಇನ್ನೊಂದು ವಸ್ತುವಿಗೆ (ಉದಾಹರಣೆಗೆ ನಿಸರ್ಗದ ವಸ್ತುವಿಗೆ ಯಾ ಕಲಾಕೃತಿಗೆ) ಅನ್ವಯಿಸುವುದು, ಆರೋಪಿಸುವುದು.